ಮಂಗಳೂರು:ಜು.16 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಂತಿವನ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಇವರ ವತಿಯಿಂದ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು, ಇಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಯೋಗ ಶಿಕ್ಷಕರಿಗೆ 2 ದಿನಗಳ ವಿಶೇಷ ಯೋಗ ಪುನಶ್ಚೇತನ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಂದೇಶ ಸಾಂಸ್ಕೃತಿಕ ಹಾಗೂ ಶಿಕ್ಷಣ ಪ್ರತಿಷ್ಠಾನ, ಮಂಗಳೂರು ಇದರ ನಿರ್ದೇಶಕರಾದ ರೇ ಫಾ ವಿಕ್ಟರ್ ವಿಜಯ್ ಲೋಬೋ , ಇವರು ಯೋಗ ಮಾನವನ ಜೀವನ ಮಟ್ಟವನ್ನು ಉತ್ತಮಗೊಳಿಸುತ್ತದೆ,ಅದು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮಟ್ಟವನ್ನು ಕಾಪಾಡುತ್ತಾ ಶಾಂತಿಯ ಜೀವನ ನಡೆಸಲು ಸಹಾಯ ಮಾಡುತ್ತದೆ. ಭಾರತೀಯ ಜೀವನ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದರಿಂದ ಸಂಸ್ಕಾರವಂತರಾಗಿ ಬೆಳೆಯಯಲು ಸಾಧ್ಯವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀಮತೀ ಕವಿತಾ ಸನಿಲ್ ಅವರು ಮಾತನಾಡಿ ಸುದೃಢ ವಾದ ದೇಹವಿದ್ದಲ್ಲಿ ಮನಸ್ಸು ಸುದೃಢವಾಗುತ್ತದೆ. ಮನಸ್ಸು ದೃಢವಾದಾಗ ನಮ್ಮ ಕಾರ್ಯ ಚಟುವಟಿಕೆಗಳ ,ಕೆಲಸದ ಕ್ಷಮತೆಂi ಹೆಚ್ಚುತ್ತದೆ. ಒತ್ತಡ ರಹಿತ ಜೀವನ ಜೀವನ ನಡೆಸಲು ಯೋಗ ಸಹಕಾರಿ ಎಂದರು. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ವಾಲ್ಟರ್ ಆರ್ ಡೆಮೆಲ್ಲೋ ಅವರು ಶುಭಾಶಂಸನೆ ಗೈದರು, ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಪಿ ಜ್ಞಾನೇಶ್, ಡಾ ಕೆ ಕೃಷ್ಣ ಶರ್ಮ, ಅಧ್ಯಕ್ಷರು, ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ ವಿಭಾಗ, ಮಂಗಳೂರು ವಿಶ್ವ ವಿದ್ಯಾನಿಲಯ, , ದ. ಕ. ಜಿಲ್ಲಾ ಗುರು ಯೋಗ ಸಂಘದ ಅಧ್ಯಕ್ಷ ಚೆನ್ನಕೇಶವ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಶೋಕ್ ಕುಮಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತೀ ಮಾರ್ಯಟ್ ಮಸ್ಕರೇನಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗನಿರ್ದೇಶಕರಾದ ಡಾ ಐ ಶಶಿಕಾಂತ್ ಜೈನ್ ಇವರು ಪ್ರಾಸ್ತಾವಿಕ ನುಡಿದರು. ಎಸ್ ಡಿ ಎಂ ಮಂಗಳಜ್ಯೋತಿ ಸಮಗಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ವಿ ಸ್ವಾಗತಿಸಿದರೆ, ಉಡುಪಿ ಜಿಲ್ಲಾ ಗುರುಯೋಗ ಸಂಘದ ಅಧ್ಯಕ್ಷ ನರೇಂದ್ರ ಕಾಮತ್ ಇವರು ಧನ್ಯವಾದ ಸಲ್ಲಿಸಿದರು. ಜಿಲ್ಲಾ ಯೋಗ ಸಂಘಟಕ ಶೇಖರ್ ಕಡ್ತಲ ಕಾರ್ಯಕ್ರಮ ನಿರ್ವಹಿಸಿದರು.