ಬಂಟ್ವಾಳ: ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಬರಗಾಲದಿಂದ ರಾಜ್ಯದಲ್ಲಿನ ರೈತರು ತತ್ತರಿಸುತ್ತಿದ್ದು ಸಹಕಾರಿ ಸಂಸ್ಥೆಗಳಿಂದ ಪಡೆದ ಬೆಳೆ ಸಾಲವನ್ನು ಮರು ಪಾವತಿಸಲಾಗದೆ ಕಂಗಾಲಾಗಿರುವ ಪರಿಸ್ಥಿತಿಯನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಜೂನ್ 20ರವರೆಗೆ ಕೃಷಿ ಅಲ್ಪಾವಧಿ ಸಾಲವನ್ನು ಪಡೆದಿರುವ 22.27ಲಕ್ಷ ರೈತರ ಅಲ್ಪಾವಧಿ ಕೃಷಿ ಮತ್ತು ಬೆಳೆ ಸಾಲದಲ್ಲಿ ರೂ.50,000.00 ರಂತೆ ಒಟ್ಟು ರಾಜ್ಯದಲ್ಲಿ 8165 ಕೋಟಿ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.
ಇದು ರೈತರ ಪಾಲಿಗೆ ವರದಾನವಾಗಿದ್ದು ಈ ಕುರಿತು ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ. ಕೇಂದ್ರವೂ ಇದೇ ರೀತಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರು ಪಡೆದ ಕೃಷಿ ಸಾಲವನ್ನು ಮನ್ನಾ ಮಾಡಿ ರೈತರಿಗೆ ನೆರವಾಗುವಲ್ಲಿ ರಾಜ್ಯದಲ್ಲಿನ ಕೇಂದ್ರದ ಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರು ಶ್ರಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.