ಬಂಟ್ವಾಳ : ಮಳೆಗಾಲದ ಬಿರುಗಾಳಿಗೆ ತೆಂಗಿನ ಮರವೊಂದು ಮನೆಯ ಮೇಲೆ ಬಿದ್ದು ಸಾವಿರಾರು ರೂ. ನಷ್ಟ ಉಂಟಾದ ಘಟನೆ ಜು.25ರಂದು ಸಂಜೆ ಸಂಭವಿಸಿದೆ.

1 (9)
ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಬಾರ್ಲ ಮನೆ ಗಂಗಾಧರ ಪೂಜಾರಿ ಅವರ ಮನೆಯ ಎದುರುಗಡೆಯಿದ್ದ ತೆಂಗಿನ ಮರ ಗಾಳಿಗೆ ತುಂಡಾಗಿ ಮನೆಯ ಮೇಲೆ ಬಿದ್ದಿದ್ದು ಮನೆಯ ಮುಂಭಾಗದ ಸಿಮೆಂಟ್ ಶೀಟ್ ಹಾಗೂ ಕಂಬಗಳು, ಮನೆಯ ಹೆಂಚುಗಳು ಒಡೆದು ಹೋಗಿದ್ದು ನೀರಿನ ಟ್ಯಾಂಕಿ ಹಾಗೂ ಪೈಪುಗಳಿಗೆ ಹಾನಿ ಉಂಟಾಗಿದೆ. ಮರ ಬಿದ್ದು ತುಳಸಿ ಕಟ್ಟೆ ಒಡೆದುಹೋಗಿದೆ. ಈ ವೇಳೆ ಗಂಗಾಧರ ಪೂಜಾರಿ ಮತ್ತು ಅವರ ಪತ್ನಿ ಹಾಗೂ ಮಗು ಮನೆಯೊಳಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ . ಘಟನೆಯಿಂದ ಸುಮಾರು 50 ಸಾವಿರ ರೂ. ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *