ಬಂಟ್ಳಾಳ :ರಾಜ್ಯ ಪೊಲೀಸ್ ಮಹಾನಿರ್ದೇಶಕ ಕೆ.ಅರ್.ದತ್ತಾ   ಅವರು ಶುಕ್ರವಾರ ಬಿ.ಸಿ.ರೋಡಿಗೆ ಅಗಮನದ ಹಿನ್ನೆಲೆಯಲ್ಲಿ   ಹದಗೆಟ್ಬಿಟ.ಸಿ.ರೋಡಿನ ಸರ್ವೀಸ್ ರಸ್ತೆಯನ್ನು ಪುರಸಭೆ ಗುಂಡಿ ಮುಚ್ಚಿದೆ.ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಕಾಲಹರಣ ಮಾಡಿದರೂ ಹೊಂಡ ಮುಚ್ಚದ ಪುರಸಭಾಡಳಿತ ಪೊಲೀಸರ ಸೂಚನೆಯ ಮೇರಗೆ ತರಾತುರಿಯಲ್ಲಿ ಹೊಂಡ ಮುಚ್ಚುತ್ತಿದೆ.

DSC_3777ಶುಕ್ರವಾರ ಬೆಳಿಗ್ಗೆ ಹೊಂಡಗಳಿಂದ ಹದಗೆಟ್ಟ ಸರ್ವೀಸ್ ರಸ್ತೆಗೆ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲನ್ನು ತುಂಬಿ ತಾತ್ಕಾಲಿಕ ಗುಂಡಿ ಮುಚ್ಚುವ ಕಾರ್ಯನಡೆಸಿದೆ.ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು,ಈದುರಸ್ಥಿಕಾರ್ಯ ಎಷ್ಟು ಪ್ರಯೋಜನಕಾರಿ ಎಂಬ ಪ್ರಶ್ನೆ ಸಾರ್ವಜನಿಕರಿಂ ಕೇಳಿಬಂದಿದೆ.ಜನಸಾಮಾನ್ಯರು,ವಾಹನ ಚಾಲಕರು ಹಲವು ಸಮಯದಿಂದ ತೊಂದರೆ ಅನುಭವಿಸಿದರೂ ಕಣ್ಣು ಮುಚ್ಚಿ ಕುಳಿತಿದ್ದ ಪುರಸಭೆ ರಾಜ್ಯ ಪಿಲೀಸ್ ಮಹಾನಿರ್ದೇಶಕ ದತ್ತಾ ಅವರ ಅಗಮನದ ಹಿನ್ನಲೆಯಲ್ಲಿ ಸರ್ವೀಸ್ ರಸ್ತೆಯ ಗುಂಡಿ ಮಚ್ಚಲು ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ.DSC_3781

ದುರಸ್ಥಗೆ ಸಂಬಂಧಿಸಿ ಸ್ಥಳೀಯಾಡಳಿತಕ್ಕೆ ಜವಾಬ್ಧಾರಿ ಇದ್ದರೂ ಪ್ರತಿಬಾರಿ ರಾ.ಹೆ.ಪ್ರಾ.ಕ್ಕೆ ಬೊಟ್ಟು ಮಾಡುತ್ತಿದ್ದ ಪುರಸಭೆ ಈಗ ಯಾಕೆ ಗುಂಡಿ ಮುಚ್ಚುತ್ತಿದೆ.ಎಂಬ ಪ್ರಶ್ನೆಯು ಕೇಳಿಬಂದಿದೆ.ಕಳೆದ ಒಂದು ವಾರದಿಂದ ಈರಸ್ತೆಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಇಲ್ಲೆ ಒಡಾಡುತ್ತಿದ್ದಾರೂ ಅವರ ಗಮನಕ್ಕೆ ಬಾರದಿರುವುದು ವಿಪರ್ಯಾಸ.ಕೊನೆಗೆ ಹೊಂಡ ಮುಚ್ಚಲು ಡಿಜಿಪಿ ಬರಬೇಕಾಯಿತು.!

By suddi9

Leave a Reply

Your email address will not be published. Required fields are marked *