ಬಂಟ್ವಾಳ: ಇತ್ತೀಚೆಗೆ ಹಂತಕರಿಗೆ ಬಲಿಯಾದ ಶರತ್ ಮಡಿವಾಳ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಳಿ ಸ್ಪೋಟಕ ಮಾಹಿತಿ ಇದೆ ಎನ್ನುವ ಗುರುಪುರ ವಜ್ರದೇಯಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಹೇಳಿಕೆಯ ಹಿನ್ನಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಬಂಟ್ವಾಳ ವೃತ್ತನಿರೀಕ್ಷರು ನೀಡಿದ ನೋಟಿಸಿನಂತೆ ಸ್ವಾಮೀಜಿಗಳ ಪರವಾಗಿ ಅವರ ವಕೀಲರು ಸೋಮವಾರ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಆಗಮಿಸಿ ಶ್ರೀಗಳ ಲಿಖಿತ ಹೇಳಿಕೆಯನ್ನು ಹಸ್ತಾಂತರಿಸಿದ್ದಾರೆ. IMG-20170717-WA0004
ಈ ಸಂದರ್ಭ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳ ಪರ ವಕಿಲ ಮಹೇಶ್ ಕಜೆ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀಗಳು ಚಾತುರ್ಮಾಸ ಹಾಗೂ ಆಷಾಡಮಾಸದ ವೃತ ನಿರತರಾಗಿರುವುದರಿಂದ ಠಾಣೆಗೆ ಬಂದು ಹೇಳಿಗೆ ನೀಡಲು ಸಾಧ್ಯವಾಗಿಲ್ಲ. ಆ ಕಾರಣ ಅವರು ನೀಡಿದ ಲಿಖಿತ ಹೇಳಿಕೆಯನ್ನು ತನಿಖಾಧಿಕಾರಿಯವರಿಗೆ ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದರು. ಸ್ಪೋಟಕ ಮಾಹಿತಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸರಕಾರದ ವೈಫಲ್ಯ ಹಾಗೂ ಅದಕ್ಕೆ ಪೂರಕವಾದ ಸ್ಥಳೀಯ ಅಂಶಗಳನ್ನು ಜನ ಸಾಮಾನ್ಯರು ಹೇಳಲು ಸಾಧ್ಯವಾಗದ ವಿಚಾರವನ್ನು ಸಂತರೊಬ್ಬರು ನಿರ್ಭಯವಾಗಿ ಹೇಳಿದ್ದಾರೆ. ಸ್ವಾಮೀಜಿಯವರ ಹೇಳಿಕೆಯ ಬಗ್ಗೆ ಬೇರೆ ಬೇರೆ ಪ್ರಶ್ನೆಗಳು ಮೂಡಿದ್ದು ಸದ್ಯ ತನಿಖಾಧಿಕಾರಿಗೆ ನೀಡಬೇಕಾದ ಮಾಹಿತಿಯನ್ನು ಲಿಖಿತವಾಗಿ ನೀಡಲಾಗಿದೆ. ಮುಂದೆ ಯಾವ ಸಂದರ್ಭದಲ್ಲಿ ಅದು ಹೊರ ಬರಬೇಕೋ ಆಗ ಹೊರ ಬೀಳಲಿದೆ ಎಂದರು.
ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಳಿ ಸ್ಪೋಟಕ ಮಾಹಿತಿ ಇದೆ ಎಂದು ಇತ್ತೇಚೆಗೆ ಸ್ವಾಮೀಜಿಗಳು ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

By suddi9

Leave a Reply

Your email address will not be published. Required fields are marked *