ಬಂಟ್ವಾಳ : ತಾಲೂಕಿನ ಇತಿಹಾಸ ಪ್ರಸಿದ್ದ ಕಾರಿಂಜ ಶ್ರೀ ಮಹತೋಭಾರ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲೂ ಭಾನುವಾರ ಆಟಿ ಅಮವಾಸ್ಯೆಯ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ತೀರ್ಥಸ್ನಾನಗೈದರು. ಮುಂಜಾನೆಯಿಂದಲೇ ಸಾಲುಗಟ್ಟಿ ಬಂದ ಭಕ್ತರು ದೇವಸ್ಥಾನದ ಪವಿತ್ರ ಕೆರೆಯಲ್ಲಿ ಸ್ನಾನಗೈದು ಬಳಿಕ ದೇವರ ದರ್ಶನಗೈದು ತಮ್ಮ ಇಷ್ಟಾರ್ಥಸಿದ್ದಿಗಾಗಿ ಪ್ರಾರ್ಥಿಸಿ ಪುನೀತರಾದರು.
ವರುಣದೇವನು ಕ್ರಪೆ ತೋರಿದರಿಂದ ತಾಲೂಕು ಮಾತ್ರವಲ್ಲ ಅಕ್ಕಪಕ್ಕದ ಊರುಗಳಿಂದಲೂ ಭಕ್ತರು ಅಗಮಿಸಿದ್ದರು.ವಿಶೇಷವಾಗಿ ನೂತನ ವಧು-ವರರು, ವ್ರದ್ದರು,ಮಕ್ಕಳು ಸಹಿತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸಿದ್ದರು.