ಬಂಟ್ವಾಳ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು ಸಾಲೆತ್ತೂರು ವಲಯದ ಆಶ್ರಯದಲ್ಲಿ ಸಮಗ್ರ ತೋಟಗಾರಿಕಾ ಬೆಳೆಗಳು ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಸಾಲೆತ್ತೂರಿನ ರಾಜೀವಗಾಂಧಿ ಸೇವಾ ಕೇಂದ್ರ ನಡೆಯಿತು.ಪಾಣೆಮಂಗಳೂರು ರೈತ ಸೇವಾ ಸಹಕಾರಿ ಸಂಘ ನಿಯಮಿತ ಇದರ ನಿರ್ದೇಶಕ ಶ್ರೀನಿವಾಸ ಭಟ್ ನಗ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯು ರೈತರಿಗೆ ಲಾಭದಾಯಕ ಕೃಷಿ ಮಾಡುವಲ್ಲಿ ಪ್ರೋತ್ಸಾಹವನ್ನು ನೀಡುತ್ತಿದೆಇದರ ಪ್ರಯೋಜನವನ್ನುರೈತರು ಪಡೆದುಕೊಳ್ಳಬೇಕು ಎಂದರು.IMG-20170804-WA0035
ಕೊಳ್ನಾಡು ಗ್ರಾಮ ಪಂಚಾಯತ್‍ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೃಷಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‍ನಿಂದ ಹಾಗೂ ಉದ್ಯೋಗಖಾತರಿಯೋಜನೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಇದರ ಪ್ರಯೋಜನವನ್ನುರೈತರು ಪಡೆದುಕೊಳ್ಳಬೇಕು ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕಿನಯೋಜನಾಧಿಕಾರಿ ಸುನೀತಾ ನಾಯಕ್‍ರವರು ಮುಖ್ಯಅತಿಥಿಯಾಗಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯು ರೈತರು ಆಧುನಿಕ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿ ಕಡಿಮೆಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು ರೈತರಿಗೆ ತಂತ್ರಜ್ಞಾನ ಒದಗಿಸುತ್ತಿದ್ದು ತಾಲೂಕಿನಲ್ಲಿ ನಡೆಸುತ್ತಿರುವ ಕೃಷಿ ಕಾರ್ಯಕ್ರಮಗಳಾದ ಕೃಷಿ ವಿಚಾರ ಸಂಕಿರಣ, ಕೃಷಿ ಅಧ್ಯಯನ ಪ್ರವಾಸ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ಬೆಳೆಗಳಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿವಾಹರಿಸಲು ಕೃಷಿ ವಿಚಾರ ಸಂಕಿರಣ ಸಹಕಾರಿಯಾಗಿದೆ.ಎಲ್ಲಾ ರೈತರು ಇದರಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.IMG-20170804-WA0037
ಸಮಗ್ರತೋಟಗಾರಿಕ ಬೆಳೆಗಳು : ವಿಚಾರ ಗೋಷ್ಠಿ
ವಿಟ್ಲ ಸಿ.ಪಿ.ಸಿ.ಆರ್.ಐನ ಹಿರಿಯತಾಂತ್ರಿಕ ಅಧಿಕಾರಿ ಪುರಂದರ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಗೋಷ್ಠಿಯನ್ನು ನಡೆಸಿ ಸಮಗ್ರತೋಟಗಾರಿಕಾ ಬೆಳಗಳಾದ ಅಡಿಕೆ, ತೆಂಗು, ಕೊಕ್ಕೊ, ಕಾಳುಮೆಣಸು ಇತ್ಯಾದಿಗಳ ಕೃಷಿಯ ಬೀಜದಆಯ್ಕೆ, ನಾಟಿ ವಿಧಾನ, ಗೊಬ್ಬರ ನಿರ್ವಹಣೆ, ರೋಗ ಕೀಟಗಳು ಮತ್ತುಅದರ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು. ರೈತರೊಂದಿಗೆ ಸಂವಾದಕಾರ್ಯಕ್ರಮದಲ್ಲಿರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆಗಿಡ ವಿತರಣೆ ಮಾಡಲಾಯಿತು.ಮಂಚಿಗ್ರಾಮ ಪಂಚಾಯತ್‍ಅಧ್ಯಕ್ಷ ಪ್ರಮೀಳ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಾಲೆತ್ತೂರು ವಲಯಾಧ್ಯಕ್ಷ ರಂಜಿತ್ ಪೂಜಾರಿ,ಜನಜಾಗೃತಿ ವೇದಿಕೆ ಸಾಲೆತ್ತೂರು ವಲಯಾಧ್ಯಕ್ಷ ದೇವಿಪ್ರಸಾದ್, ನಿಕಟಪೂರ್ವ ಜನಜಾಗೃತಿ ವಲಯಾಧ್ಯಕ್ಷ ಮಹಾಬಲ ರೈ ಬರ್ಕೆ, ಕೊಳ್ನಾಡು ಎ ಒಕ್ಕೂಟದಅಧ್ಯಕ್ಷ ಜಯರಾಮ ಶೇಖ ಉಪಸ್ಥಿತರಿದ್ದರು.ಸಾಲೆತ್ತೂರು ವಲಯದ ಮೇಲ್ವಿಚಾರಕಿ ಮಮತಾ ಸ್ವಾಗತಿಸಿ, ದಿನೇಶ್ ಶೆಟ್ಟಿ ವಂದಿಸಿದರು. ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ನಾರಾಯಣ ಕೆ.ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *