ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಹಳೇ ತಾ.ಪಂ.ಕಟ್ಟಡವನ್ನು ತೆರವುಗೊಳಿಸಿ ನಿರ್ಮಿಸಲುದ್ದೇಶಿಸಿರುವ ಬಸ್ ನಿಲ್ಲಾಣದ ಯೋಜನೆಯಬಗ್ಗೆ ‘ ಗೋಲ್ ಮಾಲ್ ‘ ನ ಶಂಕೆ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಈ ಯೋಜನೆಯ ಸಂಪೂರ್ಣ ಮಾಹಿತಿ ಸಭೆಯ ಮುಂದಿಡುವಂತೆ ಪಟ್ಟು ಹಿಡಿದ ಪ್ರಸಂಗ ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ನಡೆಯಿತು. ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಸಭಾಧ್ಯಕ್ಷತೆ ವಹಿಸಿದ್ದರು.ಬಸ್ ನಿಲ್ದಾಣದ ಯೋಜನೆ ರೂಪಿಸಲಾಗಿದೆಯೇ? ನಿರ್ಮಾಣದ ಬಳಿಕ ಆದೇ ಗುತ್ತಿಗೆದಾರನಿಗೆ 30 ವರ್ಷಗಳ ಕಾಲ ಅದನ್ನು ಲೀಸ್ ಗೆ ನೀಡಲಾಗುತ್ತಿದೆಯಂತೆ ಹೌದ ಈ ಕುರಿತು ಸ್ಪಷ್ಟವಾದ ಮಾಹಿತಿಯನ್ನು ಸಭೆಯ ಮುಂದಿಡಬೇಕೆಂದು ಸದಸ್ಯ ರಮೇಶ್ ಕುಡ್ಮೇರ್ ಆಗ್ರಹಿಸಿದರು.ಸದಸ್ಯರಾದ ಮಹಾಬಲ ಆಳ್ವ,ನವೀನ್ ಪೂಜಾರಿ,ಯಶವಂತ ಪೂಜಾರಿ ಮಾದಲಾದವರು ಇದಕ್ಕೆ ದ್ವನಿಗೂಡಿಸಿದರು.ಪುತ್ತೂರಿನಲ್ಲಿ ಅದ ಮಾದರಿಯಲ್ಲೇ ಇಲ್ಲಿ ಕೂಡ ಬಸ್ ನಿಲ್ದಾಣ ನಿರ್ಮಿಸಿ ಬಳಿಕ ಆ ಗುತ್ತಿಗೆದಾರನಿಗೆ 30 ವರ್ಷಗಳ ಕಾಲ ಲೀಸ್ ಗೆ ನೀಡುವಂತ ಮಾತುಕತೆ ಅಗಿದೆಯಂತೆ ಹಾಗಾದರೆ ತಾಲೂಕು ಪಂಚಾಯತ್ ನಿಂದಲೇ ಬಸ್ ನಿಲ್ದಾಣ ನಿರ್ಮಿಸಿ ಎಂದು ಬಿಜೆಪಿ ಸದಸ್ಯರುಪಟ್ಟು ಹಿಡಿದರು.
ಅದ್ಯಕ್ಷ ಚಂದ್ರಹಾಸ ಕರ್ಕೇರಾ ಅಗಲೀ ಉಳಿದ ಕಾಂಗ್ರಸ್ ಸದಸ್ಯರಾಗಲೀ ಯಾರೊಬ್ಬರು ತುಟಿ ಬಿಚ್ಚಲಿಲ್ಲ. ಈ ಹಂತದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಅವರು ಪ್ರತಿಕ್ರಿಯಿಸಿ ಬಸ್ ನಿಲ್ದಾಣದ ಕಾಮಗಾರಿಗೆ ಅಷ್ಟೊಂದು ಅನುದಾನ ತಾ.ಪಂ.ನಲ್ಲಿಲ್ಲ ಎಂದರಲ್ಲದೆ ಲೀಸ್ ಗೆ ಕೊಡುವ ವಿಚಾರದಲ್ಲಿ ಅಸ್ಪಷ್ಟ ಉತ್ತರ ನೀಡಿದರು. ಇದಕ್ಕೆ ಅತ್ರಪ್ತಿ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ತಾಪಂ ನಿಂದ ಸಾಧ್ಯವಿಲ್ಲವಾದರೆ ಸಚಿವರು,ಸಂಸದರ ಅನುದಾನ ಬಳಸಿಕೊಂಡು ನಿರ್ಮಿಸುವ ಎಂದು ಪಟ್ಟು ಹಿಡಿದರು.
ಈಸಂದರ್ಭದಲ್ಲಿ ಸಧ್ಯ ಪ್ರಭಾಕರ ಪ್ರಭು ಮಧ್ಯಪ್ರವೇಶಿಸಿ ಯೋಜನೆಯ ಬಗ್ಗೆ ಸದಸ್ಯರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕೆಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆಯಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಬಿಜೆಪಿ ಸದಸ್ಯರ ಗದ್ದಲ ಜೋರಾಗುತ್ತಿದ್ದಂತರ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಅವರು ಪ್ರತಿಕ್ರಿಯಿಸಿ ಹಳೇ ಕಟ್ಟಡ ಕೆಡವಲು ಈಗಾಗಲೇ ಗುತ್ತಿಗೆ ನೀಡಲಾಗಿದೆ. ಇದಕ್ಕೆ ಜಿಪಂ ನಿಂದ ಅನುಮೋದನೆ ಸಿಕ್ಕಿದಾಕ್ಷಣ ಈ ವಿಚಾರದಲ್ಲಿ ವಿಶೇಷ ಸಭೆ ಕರೆದು ಮಾಹಿತಿ ನೀಡಲಾಗುವುದು ಎಂದು ಹೇಳಿ ಚರ್ಚೆಗೆ ತೆರೆ ಹಾಕಿದರು .ಉಪಾಧ್ಯಕ್ಷ ಅಬ್ಬಾಸ್ ಅಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮಿ ಬಂಗೇರ ಉಪಸ್ಥಿತರಿದ್ದರು.