ಬಂಟ್ವಾಳ: ಯುವ ಜನತೆ ದೇಶದ ಭವಿಷ್ಯ, ಯುವಕರು ತಂದೆ ತಾಯಿ ಗುರುಹಿರಿಯರು ಮತ್ತು ದೇಶವನ್ನು ಪ್ರೀತಿಸಬೇಕು, ಗೌರವಿಸಿಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಶ್ಯಾಮ್ ರಾವ್ ಹೇಳಿದರು ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯತ್ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ . ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ದ್ ಹೋರಾಡಿ ಬಲಿದಾನ ಮಾಡಿದ ಮಹನೀಯರ ಬಗ್ಗೆ ನಾವು ನಿತ್ಯ ನೆನಪು ಮಾಡಬೇಕಾಗಿದೆ ಎಂದು ಹೇಳಿದರು.
ಕೇವಲ ಸ್ವಾತಂತ್ರ್ಯ ದಿನಾಚರಣೆ ಸಮಂಜಸವಲ್ಲ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯುವ ಪೀಳಿಗೆ ತಿಳಿದುಕೊಂಡು ಅವರಿಗೆ ಗೌರವದ ಸಂಕೇತವಾಗಿ ಬಲಿಷ್ಟ ದೇಶ ನಿರ್ಮಾಣದ ಕೆಲಸಕ್ಕೆ ಮೌಲ್ಯಯುತ ಶಿಕ್ಷಣ ಪಡೆಯಬೇಕು ಎಂದರು. ಎಸ್.ಎ.ಎಸ್ ಕಾಲೇಜಿನ ಸಹ ಪ್ರಾಧ್ಯಪಕರಾದ ಡಾ| ನಾಗವೇಣಿ ಮಂಚಿ ಪ್ರಧಾನ ಭಾಷಣ ಮಾಡಿದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ತುಕುಡಿಗಳಾದ ಪೋಲೀಸ್, ಗೃಹರಕ್ಷಕದಳ, ಎನ್ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಗೈಡ್ಸ್, ಕಬ್-ಗೈಡ್ಸ್, ಬುಲ್-ಬುಲ್, ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ , ಅತಿಥಿಗಳ ವಂದನೆ ಸ್ವೀಕಾರ ಬಳಿಕ ಮಿನಿವಿಧಾನ ಸೌದದ ಮುಂಭಾಗದಲ್ಲಿ ದ್ವಜಾರೋಹಣ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
