ಬಂಟ್ವಾಳ : ರಾಜ್ಯದಲ್ಲಿ ಮೊದಲ ಬಾರಿಗೆ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕು ಪತ್ರ ನೀಡಿದ ಹೆಗ್ಗಳಿಕೆ ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಮೂಲಕ ಶೇಕಡಾ 100ರಷ್ಟು ಹಕ್ಕು ಪತ್ರ ವಿತರಿಸುವ ಗುರಿ ಹೊಂದಿದೆ ಎಂದು ಅರಣ್ಯ ಪರಿಸರ ಜಿವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನುಡಿದರು. ಅವರು ಗೊಳ್ತಮಜಲು ಮತ್ತು ಅಮ್ಟೂರು ಗ್ರಾ.ಪಂ.ವ್ಯಾಪ್ತಿಯ ಅರ್ಹ ಫ ಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಮಂಜೂರಾದ 75ಕ್ಕೂ ಮಿಕ್ಕಿ ಮನೆ ನಿವೇಶನದ ಹಕ್ಕುಪತ್ರವನ್ನು ಕಲ್ಲಡ್ಕ ಸ.ಹಿ.ಪ್ರಾ.ಶಾಲೆ ಸಭಾಂಗಣದಲ್ಲಿ ವಿತರಿಸಿ ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎ.ಪಿ.ಎಂ.ಸಿ ಅಧ್ಯಕ್ಷ ಪದ್ಮನಾಭ ರೈ , ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಎ.ಪಿ.ಎಂ.ಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ , ಮಾಜಿ ತಾ.ಪಂ.ಸದಸ್ಯೆ ಐಡಾ ಸುರೇಶ್ , ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಗ್ರಾ.ಪಂ.ಸದಸ್ಯರಾದ ಆಯೀಷಾ, ವಸಂತಿ, ಎಲಿಯಾಸ್, ಮಹಮ್ಮದ್,ವೇದಾವತಿ, ಜೋಸ್ಲಿನ್ ತೋರಾಸ್, ಪೂರ್ಣೀಮಾ ಶ್ರೀಧರ್ ರಾವ್, ಗುರುವಪ್ಪ ಜಯಂತ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕುಟುಂಬ ಸಹಾಯಧನ, ಮಳೆಹನಿ ಪರಿಹಾರ ಮತ್ತಿತರ ಚೆಕ್ ವಿತರಿಸಿದರು.ಇದೇ ಸಂದರ್ಭದಲ್ಲಿ ಕಂದಾಯ ನಿರಿಕ್ಷಕ ರಾಮ ಕೆ. ಮತ್ತು ಗ್ರಾಮ ಕರಣಿಕ ಯೋಗಾನಂದ ರವರನ್ನು ಸಚಿವರು ಅಭಿನಂದಿಸಿದರು. ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಶೆಣೈ ಸ್ವಾಗತಿಸಿ ವಂದಿಸಿದರು. ಕಂದಾಯ ನಿರೀಕ್ಷಕ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.
