ಕಲ್ಲಡ್ಕ:ನಾವೆಲ್ಲರೂ ಮನೆ, ಧರ್ಮ, ದೇಶಪ್ರೇಮದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಬೇಕು.ಉತ್ತಮ ಪರಿಸರ ನಿರ್ಮಿಸಿ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ, ಮಾನವೀಯಚಿಂತನೆಯನ್ನು ಬೆಳೆಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್‍ನ ನ್ಯಾಯವಾದಿಯಾದ ಶಮ್ ಶ್ರವಿಶ್ ರಿನ್ ಹೇಳಿದರು. ಕೊಲ್ಲೂರು ಶ್ರೀ ಮುಕಾಂಬಿಕಾ ಕ್ಷೇತ್ರದಿಂದ ಬರುತ್ತಿರುವ ಅನುದಾನವನ್ನುಕರ್ನಾಟಕ ಸರ್ಕಾರ ರದ್ದುಗೊಳಿಸಿದ ವಿಚಾರ ತಿಳಿದು ತುಂಬಾ ಬೇಸರವಾಯಿತು. ಇಂತಹ ಅತ್ಯುತ್ತಮ ವಿದ್ಯಾಕೇಂದ್ರದಕ್ಕೆ ಸರ್ಕಾರ ಈ ರೀತಿತೊಂದರೆ ಮಾಡಬಾರದಿತ್ತು.ಇಲ್ಲಿ ನಿರಂತರಅನ್ನದಾನ, ವಿದ್ಯಾದಾನ ನಡೆಯುತ್ತಿರಬೇಕುಅದಕ್ಕಾಗಿ ನನ್ನ ಸಹಕಾರವೂಇದೆ.ಅಲ್ಲದೇಇತರೆ ಸಂಘ ಸಂಸ್ಥೆಗಳು, ದಾನಿಗಳು ಸಹಕಾರವೂಇರಲಿ ಎಂದು ಶ್ರೀರಾಮ ಪ್ರೌಢಶಾಲೆಯ ‘ಸರಸ್ವತಿ ವಂದನಾ’ ಸಭಾಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.5555
ಈ ಸಂದರ್ಭದಲ್ಲಿ ನಿರ್ಗತಿಕ ಮಹಿಳಾ ಸೇವಾಶ್ರಮದಗೀತಾ ಶೆಟ್ಟಿ ಮತ್ತುತೇಜಾಕ್ಷಿ, ಆರ್ಕಿಟೆಕ್ಟ್ ಶ್ರೀ ಸುಪ್ರೀತ್ ಆಳ್ವ, ಉದ್ಯಮಿಗಳಾದ ಶ್ರೀ ಅನಂತ ಶೆಟ್ಟಿ, ಹಿಂದೂಜಾಗರಣ ವೇದಿಕೆ ಸುರತ್ಕಲ್‍ಇದರ ಶ್ರೀ ಸತೀಶ್ ಮಂಚೂರು, ಶ್ರೀ ಕಾರ್ತೇಶ್, ಶ್ರೀ ವಿಶ್ವನಾಥ, ಶ್ರೀ ದಿನೇಶ್, ಶ್ರೀರಾಮ ಪ್ರೌಢಶಾಲಾಹಿರಿಯಶಿಕ್ಷಕರಾದ ಶ್ರೀ ಕೇಶವ ಆಚಾರ್ಯ, ಉಪಸ್ಥಿತರಿದ್ದರು.ವೃತ್ತಿಕಲಾ ಶಿಕ್ಷಕರಾದ ಶ್ರೀ ಜಿನ್ನಪ್ಪ ಏಳ್ತಿಮಾರ್ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *