ಬಂಟ್ವಾಳ : ಅಖಿಲ ಭಾರತ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೂವತ್ತೇಳನೇ ರ್ಯಾಂಕ್ ಪಡೆದ ಹಾಗೂ ಕರ್ನಾಟಕಕ್ಕೆ ಮೂರನೆಯವರಾದ ಬಂಟ್ವಾಳದ ಡಾ.ನವೀನ್ ಭಟ್ ವೈ. ಎಂ.ಬಿ.ಬಿ.ಎಸ್ ಐಎಎಸ್ ಇವರು ಉತ್ತರಕಾಂಡ ರಾಜ್ಯದ ಮಸ್ಸೂರಿ ಎಂಬಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮುಂದಿನ ವಾರ ತರಬೇತಿಗಾಗಿ ತೆರಳುವ ಹಿನ್ನಲೆಯಲ್ಲಿ ಧರ್ಮಸ್ಥಳ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ಉಪಸ್ಥಿತರಿದ್ದರು.