ಬಂಟ್ವಾಳ | ವಿದ್ಯಾರ್ಥಿ ಅಂಕ ಪಡೆಯುವ ಯಂತ್ರವಾಗದೆ ಕಲೆ-ಸಾಹಿತ್ಯ-ಸಂಗೀತ ಮತ್ತು ಕ್ರೀಡೆಯನ್ನು ಪ್ರೇರೇಪಿಸುವ ವ್ಯಕ್ತಿತ್ವ ಮೈಗೂಡಿಸಿಕೊಂಡಿರಬೇಕು ಎಂದು ಸಾಹಿತಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಭುವನೇಶ್ವರಿ ಹೆಗ್ಡೆ ಹೇಳಿದರು.ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಜಿಲ್ಲಾಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಮತ್ತುಸಾಂಸ್ಕøತಿಕ ಸ್ಫರ್ಧೆ ವಿಕಾಸ್ -2017ನ್ನು ಉದ್ಘಾಟಿಸಿ ಮಾತನಾಡಿದರು.
ವಿಕಾಸ ಎಂಬುದು ಬೆಳವಣಿಗೆ. ವಿದ್ಯಾರ್ಥಿ ಉದ್ಯೋಗಕ್ಕೆ ಪಾದಾರ್ಪಣೆ ಮಾಡಿ ತಕ್ಷಣ ವ್ಯಕ್ತಿತ್ವ ಸೌಂದರ್ಯದ ವಿಕಾಸ ನಿಲ್ಲುತ್ತದೆ. ಗ್ರಾಮೀಣ ಭಾಗದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಕೀಳಾರಿಮೆವಿದ್ದು ಸಾಮಾನ್ಯ ಜ್ಞಾನವಿಲ್ಲದಿದ್ದರೂ ಆತ್ಮವಿಶ್ವಾಸ ಇರುತ್ತದೆ. ಶಿಕ್ಷಕರು ಮತ್ತುಪೋಷಕರು ತಾಳ್ಮೆ ಮತ್ತು ಪ್ರೀತಿಯಿಂದ ವಿದ್ಯಾರ್ಥಿಯಲ್ಲಿ ಅಡಗಿರುವ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ನೀಡಿ ವ್ಯಕ್ತಿತ್ವ ವಿಕಾಸದ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು. ಕಲೆ-ಸಾಹಿತ್ಯ-ಸಂಗೀತ ಮುಂತಾದ ಅಭಿರುಚಿಗಳಿಗೆ ಒಂದು ಚೌಕಟ್ಟನು ಹಾಕಿಕೊಂಡರೆ ಅದಕ್ಕೆ ಸೂಕ್ತ ಮೌಲ್ಯ ಸಿಗುತ್ತದೆ. ಎಲ್ಲರಿಗೂ ಬಹುಮಾನವೇ ಮಾನದಂಡವಲ್ಲ. ಫಲಿತಾಂಶ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಜೀವನದಲ್ಲಿ ಸಕರಾತ್ಮಕ ಗುಣವನ್ನು ಮನಸಿನಲ್ಲಿಟ್ಟುಕೊಂಡು ಸೋಲು-ಅವಮಾನಗಳನ್ನು ಧೈರ್ಯವಾಗಿ ಎದುರಿಸಬೇಕು. ಪ್ರೀತಿ-ವಾತ್ಸಲ್ಯ, ತಾಳ್ಮೆಯಿಂದ ಪ್ರತಿಭೆಯನ್ನು ಪೋಷಿಸಿ ಬೆಳೆಸಿದಾಗ ಅಭಿರುಚಿಗಳು ಖಂಡಿತವಾಗಿ ಕೈ ಹಿಡಿದು ಸರ್ವಾಂಗಿಣ ಪ್ರಗತಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಎಸ್.ವಿ.ಎಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸ್ಫರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ತಮ್ಮಲ್ಲಿ ಅಂತರ್ಗತವಾದ ಪ್ರತಿಭೆ, ಕೌಶಲ ಅನಾವರಣದ ಜತೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸೋಲು ಮತ್ತು ಗೆಲುವುವನ್ನು ಸಮಾನವಾಗಿ ಸ್ವೀಕರಿಸಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. 
ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಮತ್ತು ವಿಕಾಸ್-2017ರ ಸಂಯೋಜಕ ಬಾಲಕೃಷ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನನ್ಯ ಜಿ. ಮತ್ತು ಮಾನಸ ಪ್ರಾರ್ಥಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಸ್ಮಿತಾ ಎ. ಶೈಕ್ಷಣಿಕ ಮತ್ತುಸಾಂಸ್ಕøತಿಕ ಸ್ಫರ್ಧೆ ವಿಕಾಸ್ -2017ರ ನಿಯಮಾವಳಿ ಪ್ರಸ್ತುತಪಡಿಸಿದರು. ಎಸ್.ವಿ.ಎಸ್ ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಸ್ವಾಗತಿಸಿ, ಕನ್ನಡ ಉಪನ್ಯಾಸಕ ಚೇತನ್ ಎಂ. ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ಉಪನ್ಯಾಸಕಿ ಭಾರತಿ ಪಿ. ವಂದಿಸಿದರು.