ಕುಪ್ಪೆಪದವು : ಪ್ರಧಾನಮಂತ್ರಿ, ನರೇಂದ್ರ ಮೋದಿಯವರು ಬಡವರ ಕಲ್ಯಾಣಕ್ಕಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಅವುಗಳ ಪ್ರಯೋಜನ ಬಡವರಿಗೆ ದೊರೆಯುವಂತಾಗಲು ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಸಚಿವ ಕ್ರಷ್ಣ ಪಾಲೇಮಾರ್ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಅವರು ಮೋಗರು ಕುಕ್ಕಟ್ಟೆಯಲ್ಲಿ ಭಾರತೀಯ ಜನತಾ ಪಕ್ಷದ ಗುರುಪುರ ಶಕ್ತಿ ಕೇಂದ್ರ ಮತ್ತು ಸ್ಥಾನೀಯ ಸಮಿತಿಗಳ ಜಂಟಿ ಆಶ್ರಯದಲ್ಲಿ ನಡೆದ ಪಂಡಿತ್ ದೀನ್‍ದಯಾಳ್ ಜನ್ಮಶತಾಬ್ದಿಯ ಅಂಗವಾಗಿ ಜರಗಿದ ಸರಕಾರಿ ಸೌಲಭ್ಯಗಳ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತಾನಾಡಿದರು ಇಂತಹ ವಿಶೇóಷ ಕಾರ್ಯಾಗಾರಗಳು ಈ ನಿಟ್ಟಿನಲ್ಲಿ ಮಾದರಿಯಾಗಿವೆ. ಪ್ರತಿಯೊಂದು ಬೂತ್‍ಮಟ್ಟದಲ್ಲೂ ಇಂತಹ ಕಾರ್ಯಾಗಾರಗಳನ್ನು ನಡೆಸಿ ಸರಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕೆಂದು ಎಂದರು.10-9-17

ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಜೀವನ್‍ಜ್ಯೋತಿ ವಿಮಾ ಯೋಜನೆ ಆರೋಗ್ಯವಿಮೆ ಸೇರಿದಂv ಸುಮಾರು 14 ಸರಕಾರಿ ಯೋಜನೆಗಳಿಗಾಗಿ ಫಲಾನಿಭಾವಿಗಳಿಂz ಅರ್ಜಿಗಳನ್ನು ಮಾಜಿ ಸಚಿವರು ಸ್ವೀಕರಿಸಿದರು. ಮಂಗಳೂರು ಉತ್ತರ ಮಂಡಳ ಬಿಜೆಪಿ ಅಧ್ಯಕ್ಷ ಡಾ/ ಭರತ್ ವೈ ಶೆಟ್ಟಿ. ಉಪಾಧ್ಯಕ್ಷ ಶಿವಪ್ಪ ಬಂಗೇರ, ಶಕ್ತಿ ಕೇಂದ್ರದ ಅಧ್ಯಕ್ಷ ದೋಗು ಪೂಜಾರಿ ವೇದಿಕೇಯಲ್ಲಿ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *