ಬಂಟ್ವಾಳ: ತಾಲೂಕು ಪಂಚಾಯತ್‍ನ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾಲುಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಈ ಸಂದರ್ಭ  ಮಾತನಾಡಿದ ತಾ.ಪಂ.ಅಧ್ಯಕ್ಷ ಶಿಶು ಅಭಿವೃದ್ದಿ ಇಲಾಖೆಯ ಬಾಣಂತಿಯರ ಅನ್ನ ಪೂರ್ಣ ಯೋಜನೆ  ಸಮರ್ಪಕವಾಗಿ ಬಾಣಂತಿಯರಿಗೆ ಸಿಗುವಲ್ಲಿ ಹೆಚ್ಚಿನ ಪಾತ್ರವಹಿಸಬೇಕು, ಯಾವುದೇ ದೂರುಗಳು ಬರಬಾರದು ಅ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದರು.1 (2)

 ಉಪಾಧ್ಯಕ್ಷ ಅಬ್ಬಾಸ್ ಆಲಿ ಮೆಸ್ಕಾಂ ಇಲಾಖೆಯವರು ಗ್ರಾಮಗ್ರಾಮಗಳಲ್ಲಿ ಮೆಸ್ಕಾಂ ಸಮಸ್ಯೆಗೆ ಸಂಬಂದಪಟ್ಟಂತೆ ಗ್ರಾಮ ಸಭೆಗಳನ್ನು ನಡೆಸಿ ಅಮೂಲಕ ಸಮಸ್ಯೆಗೆ ಸ್ಪಂಧಿಸಿ ಎಂದು ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ ಬಂಗೇರ ತಾ.ಪಂ.ಕಾರ್ಯನಿರ್ವಹನಾಧಿಕಾರಿ ಸಿಪ್ರಿಯಾನ್ ಮಿರಾಂದ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *