ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ.-ಉಡುಪಿ ಜಿಲ್ಲೆ ಇದರ 27ನೇ ವಾರ್ಷಿಕ ಮಹಾಸಭೆಯು 17-09-2017ನೇ ಭಾನುವಾರ ಬೆಳಿಗ್ಗೆ 8-30ಕ್ಕೆ ಮಹಾಲಕ್ಷ್ಮಿ ಸಭಾ ಭವನ ಉಚ್ಚಿಲದಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಹಾಸಭೆಯನ್ನು ಉದ್ಘಾಟಿಸಲಿರುವರು. ಜಿಲ್ಲಾಧ್ಯಕ್ಷ ಜಗನ್ನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಎಂ.ಪಾಟೀಲ್ , ಸಲಹಾ ಸಮಿತಿ ಅಧ್ಯಕ್ಷ ವಿಠಲ ಚೌಟ , ದ,ಕ,ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಎಚ್. ಹೊಸಬೆಟ್ಟು , ಬೆಂಗಳೂರು ಕೆ.ಪಿ.ಎ ಅಧ್ಯಕ್ಷ ಬಿ.ಎಸ್.ಶಶಿಧರ್ , ಎಸ್‍ಕೆಪಿಎ ಸಹಕಾರಿ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್ , ಎಸ್ಕೆಪಿಎ ಕಾನೂನು ಸಲಹೆಗಾರ ಜಗ ದೀಶ ಶೇಣವ ಭಾಗವಹಿಸಲಿರುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *