ಬಂಟ್ವಾಳ: ಶಾಲೆಗಳಿಗೆ ಮಧ್ಯಾವಧಿ ರಜೆಯನ್ನು ನವರಾತ್ರಿ ರಜೆಯನ್ನಾಗಿ ಮಾರ್ಪಡಿಸಿ ಘೋಷಣೆ ಮಾಡುವಂತೆ ಮುಖ್ಯ ಮಂತ್ರಿಗಳಿಗೆ ಬಿಜೆಪಿ ಮುಖಂಡ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಆಗ್ರಹಪಡಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ ನವರಾತ್ರಿಯ ಸಂದರ್ಭ ವಿಶೇಷವಾದ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯವುದು ರೂಡಿ. ಇಂತಹ ಸಂದರ್ಭದಲ್ಲಿ ಈ ವರ್ಷ ನವರಾತ್ರಿ ಸಮಯದಲ್ಲಿ ಶಾಲಾ ಪರೀಕ್ಷೆಗಳು ನಡೆಯಲಿದ್ದು ನವರಾತ್ರಿ ಸಂಭ್ರಮದಿಂದ ಮಕ್ಕಳು ಶಿಕ್ಷಕರ ಜೊತೆ ದ.ಕ.ಜಿಲ್ಲೆಯ ಬಹುತೇಕ ಜನರು ವಂಚಿತರಾಗುತ್ತಾರೆ .

ಶಾಲೆಗಳಿಗೆ ವಾರ್ಷಿಕ ಮಧ್ಯಾವಧಿ ರಜೆಯನ್ನು ನವರಾತ್ರಿ ಸಮಯದಲ್ಲಿ ಹಿಂದಿನಿಂದಲೂ ನೀಡಲಾಗುತ್ತಿತ್ತು, ಈ ಬಾರಿ ಮಾರ್ಪಡು ಮಾಡಿ ರಜೆ ನೀಡಬೇಕು. ಹೆಚ್ಚಾಗಿ ನವರಾತ್ರಿ ಉತ್ಸವ ಮತ್ತು ಮಧ್ಯಾವದಿ ರಜೆ ಸಮಾನಾಗಿ ಒಂದೇ ತಿಂಗಳಲ್ಲಿ ಬರುತ್ತಿತ್ತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ , ಶಿಕ್ಷಕರಿಗೆ ಜೊತೆಗೆ ಮನೆಯವರಿಗೂ ನವರಾತ್ರಿ ಉತ್ಸವದಲ್ಲಿ ಸಂತಸದಲ್ಲಿ ಭಾಗವಹಿಸಲು ಸಹಕಾರಿಯಾಗುತ್ತಿತ್ತು. ಅದರಲ್ಲೂ ಮೈಸೂರಿನ ದಸರಾ ಹೊರತುಪಡಿಸಿ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾ ರಾಷ್ಟ್ರ ವ್ಯಾಪ್ತಿ ಪ್ರಸಿದ್ಧಿ ಪಡೆದಿದ್ದು ಕರಾವಳಿಯ ಜನತೆ ಕುಟುಂಬ ಸಹಿತರಾಗಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ನವರಾತ್ರಿ ಎಂದರೆ, ಹುಲಿ ಕುಣಿತ, ವಿವಿಧ ವೇಷಗಳು ಕರಾವಳಿ ಜಿಲ್ಲೆಯ ವೈಶಿಷ್ಟವಾಗಿದೆ.

ಮೈಸೂರು ಜಿಲ್ಲೆಗೆ ಈಗಾಗಲೆ ದಸರಾ ರಜೆ ಘೋಷಣೆ ಮಾಡಿದ್ದು, ಅದರಂತೆ ಅವಿಭಜಿತ ದ.ಕ.ಜಿಲ್ಲೆಗೆ ನವರಾತ್ರಿ ಸಮಯದಲ್ಲಿಯೇ ಮಧ್ಯಾವಧಿ ರಜೆ ನೀಡಬೇಕು.ಬಕ್ರೀದ್ ಮತ್ತು ರಂಜಾನ್ ಹಬ್ಬಕ್ಕೆ ರಜೆ ಮಾರ್ಪಾಡು ಮಾಡುವ ರಾಜ್ಯ ಸರಕಾರಕ್ಕೆ ನವರಾತ್ರಿಯ ರಜೆಯನ್ನು ಮಾರ್ಪಾಡು ಮಾಡಲು ಯಾಕೆ ಸಾಧ್ಯವಿಲ್ಲ ? ಈ ಬಗ್ಗೆ ಮುಖ್ಯ ಮಂತ್ರಿಗಳು ವಿಶೇಷ ಮುತುವರ್ಜ ವಹಿಸಿ ರಜೆಯನ್ನು ಮಾರ್ಪಾಡು ಮಾಡುವಂತೆ ಆಗ್ರಹ ಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *