ಸುದ್ದಿ9ಬಂಟ್ವಾಳ : ಇಲ್ಲಿನ ಪುರಸಭೆಯ ಕೆಲ ದಿನಗಳಿಂದ ಖಾಲಿ ಬಿದ್ದಿರುವ ಮುಖ್ಯಾಧಿಕಾರಿ ಹುದ್ದೆಗೆ ಕೊನೆಗೂ ಹಲವು ಏಳು-ಬೀಳಿನ ಬಳಿಕ ಲೀನಾ ಪಿಂಟೋ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇಲ್ಲಿನ ಮುಖ್ಯಾಧಿಕಾರಿ ಆರ್ ವಿ ಜತ್ತನ್ನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಅಮಾನತುಗೊಂಡ ಬಳಿಕ ನಿಯೋಜನೆ ಆಧಾರದಲ್ಲಿ ಮುಖ್ಯಾಧಿಕಾರಿ ಜವಾಬ್ದಾರಿ ನಿಭಾಯಿಸಿದ್ದ ಎ ವಿ ಗಣೇಶ್ ಇತ್ತೀಚೆಗೆ ನಿವೃತ್ತಿಗೊಂಡಿದ್ದರಿಂದ ಕಳೆದ ಎರಡೂವರೆ ತಿಂಗಳಿನಿಂದ ಇಲ್ಲಿನ ಮುಖ್ಯಾಧಿಕಾರಿ ಹುದ್ದೆ ಖಾಲಿ ಬಿದ್ದಿತ್ತು. ಬಳಿಕ ಇಲ್ಲಿನ ಮುಖ್ಯಾಧಿಕಾರಿ ಹುದ್ದೆಗೆ ಹಲವು ರಾಜಕೀಯ ಲಾಬಿಗಳು ತೆರೆಮರೆಯಲ್ಲೇ ನಡೆದು ಅಂತಿಮವಾಗಿ ಇದೀಗ ಲೀನಾ ಪಿಂಟೋ ಎಂಬ ಮಹಿಳಾಮಣಿಯೋರ್ವರು ಇಲ್ಲಿನ ಮುಖ್ಯಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದಾರೆ. ಲೀನಾ ಪಿಂಟೋ ಅಧಿಕಾರ ವಹಿಸುವ ಮೂಲಕ ಬಂಟ್ವಾಳ ಪುರಸಭೆಯಲ್ಲಿ ಮಹಿಳೆಯರದ್ದೇ ರಾಜ ದಬರ್ಾರು ನಿಮರ್ಾಣವಾದಂತಾಗಿದೆ. ಈಗಾಗಲೇ ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳನ್ನು ಮಹಿಳಾ ಮಣಿಗಳು ಅಲಂಕರಿಸುತ್ತಿದ್ದಾರೆ. ಪುರಸಭೆಯ ಪ್ರಮುಖ ಹುದ್ದೆಯಲ್ಲಿ ಮಹಿಳೆಯರೇ ರಾರಾಜಿಸುತ್ತಿದ್ದರೂ ಅದರಲ್ಲೂ ಕೋಮು ಸಾಮರಸ್ಯ ಕಂಡುಬಂದಿರುವುದು ಒಂದು ವಿಶೇಷತೆಯಾಗಿದೆ.
ಅಧ್ಯಕ್ಷೆ ವಸಂತಿ ಚಂದಪ್ಪ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೆ, ಉಪಾಧ್ಯಕ್ಷೆ ಯಾಸ್ಮಿನ್ ಹಾಮದ್ ಮುಸ್ಲಿಂ ಧರ್ಮವನ್ನು ಪ್ರತಿನಿಧಿಸುತ್ತಿದ್ದು, ಇದೀಗ ಮುಖ್ಯಾಧಿಕಾರಿ ಹುದ್ದೆಗೆ ನೇಮಕಗೊಂಡಿರುವ ಲೀನಾ ಪಿಂಟೋ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಮೂಲಕ ಮೂರು ಧರ್ಮಗಳ ಪ್ರತಿನಿಧಿಗಳು ಇಲ್ಲಿನ ಪುರಸಭೆಯ ಪ್ರಮುಖ ಹುದ್ದೆಯನ್ನು ಅಲಂಕರಿಸಿದಂತಾಗಿದೆ.
ಹಾವೇರಿ, ಪುತ್ತೂರು ಮೊದಲಾದೆಡೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಲೀನಾ ಪಿಂಟೋ ಪ್ರಸ್ತುತ ಮೂಡಿಗೆರೆ ಪಟ್ಟಣ ಪಂಚಾಯತ್ನಿಂದ ಬಂಟ್ವಾಳಕ್ಕೆ ಮುಖ್ಯಾಧಿಕಾರಿಯಾಗಿ ವಗರ್ಾವಣೆಗೊಂಡು ಬಂದಿದ್ದಾರೆ.
