ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ) ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ವಿಟ್ಲ, ಗ್ರಾ.ಪಂ.ಮಂಚಿ ಮತ್ತು ಸ್ತ್ರೀ ಶಕ್ತಿ ಗೊಂಚಲು ಮಂಚಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಹಾಗೂ ಮಾತೃ ಪೂರ್ಣ ಯೋಜನೆಯ ಮಾಹಿತಿ ಕಾರ್ಯಗಾರ ಮಂಚಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಧೀಶ ಮತ್ತು ಜೆ.ಎಂ.ಎಪ್.ಸಿ ಹಾಗೂ ತಾಲೂಕು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಸಿಡಿ ಮಾತನಾಡಿ ಆಧುನಿಕತೆಯ ಆಡಂಬರದ ಜೀವನದಲ್ಲಿ ನಮ್ಮ ಪಾರಂಪರಿಕ ಆಹಾರ ಪದ್ದತಿಯ ಬದಲಾವಣೆಯಿಂದಾಗಿ ಹೊಸ ಹೊಸ ರೋಗಗಳು ಮನುಷ್ಯನಿಗೆ ಬರಲು ಶುರುವಾಯಿತು. ಸರಕಾರವೇ ಆರೋಗ್ಯದ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಹಂತಕ್ಕೆ ಮುಟ್ಟಿದೆ ಎನ್ನವುದು ದೊಡ್ಡ ದುರಂತ ಎಂದರು.1 (1)

ಅನುಕರಣೆಯನ್ನು ಬಿಟ್ಟು ಜೀವನ ಮಾಡಿದಾಗ ಜೀವನ ಶೈಲಿ ಮತ್ತು ಆರೋಗ್ಯ ಸರಿ ಇರುತ್ತದೆ. ಮನೆಯಲಲಿ ತಯಾರಿಸಿದ ಆಹಾರವನ್ನು ಕುಟುಂಬರೊಂದಿಗೆ ಕುಳಿತು ಸೇವಿಸಿದಾಗ ಸಂಸಾರವೂ ಚೆನ್ನಾಗಿರುತ್ತೆ , ಆರೋಗ್ಯವೂ ಸರಿ ಇರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ವಹಿಸಿದ್ದರು. ವೇದಿಕೆಯಲ್ಲಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಂ.ಎಸ್.ಆಲಿ, ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಜಿ.ಪಂ.ಸದಸ್ಯ ಎಂ.ಎಸ್ ಮಹಮ್ಮದ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಗ್ರಾ.ಪಂ.ಉಪಾಧ್ಯಕ್ಷ ಮೋಹನ್‍ದಾಸ, ವಕೀಲರಾದ ಆಶಾ ಮಣಿ ಗ್ರಾ.ಪಂ.ಸದಸ್ಯರಾದ ಜಿ.ಎಂ.ಇಬ್ರಾಹಿಂ, ಬದ್ರುದ್ದೀನ್, ಕೃಷ್ಣಪ್ಪ ಬಂಗೇರ, ಪುಷ್ಪ ಕಾಮತ್, ರೋಜಿ ಡಿಮೆಲ್ಲೋ, ಮೋಹನ್ ಪ್ರಭು, ಸುಮ, ಕೆಎಸ್ ಪ್ರತಿಮಾ ಮತ್ತು ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಭವ್ಯ ಉಪಸ್ಥಿತರಿದ್ದರು. ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಯ ಶಿಶು ಅಭಿವೃದಿ ಯೋಜನಾಧಿಕಾರಿ ಸುಧಾಜೋಶಿ ಸ್ವಾಗತಿಸಿ ಮೇಲ್ವಿಚಾರಕಿ ಗುಣವತಿ ವಂದಿಸಿದರು.

By suddi9

Leave a Reply

Your email address will not be published. Required fields are marked *