2000-notes

ವಿಜಯಪುರ: ಖೋಟಾ ನೋಟು ಮುದ್ರಿಸುತ್ತಿದ್ದ  ಘಟಕದ ವೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ನಗರದ ದರ್ಗಾ ಪ್ರದೇಶದ ಬಳಿ ನಡೆದಿದೆ.

ಬಂಧಿತ  ಆರೋಪಿಗಳನ್ನು  ಹಾಜಿ ಮಸ್ತಾನ್‌ ಇಮಾಮ್‌ ಸಾಬ್ ವಾಲಿಕಾರ(23), ಆಸೀಫ್‌ ಸಿರಾಜ್ ಮಳ್ಳಿ(27), ಮೆಹಬೂಬ ಗುಲಾಬ್‌ಸಾಬ ವಾಲಿಕಾರ(23)  ಎಂದು ಗುರುತಿಸಲಾಗಿದೆ.

ಬಂಧಿತರಿಂದ 200, 500 ಹಾಗೂ 2000 ರೂ. ಮುಖಬೆಲೆಯ 67,200 ರೂ. ಖೋಟಾ ನೋಟನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ  ನೋಟು‌ ತಯಾರಿಸುವ 2 ಯಂತ್ರ, 38 ಬಂಡಲ್‌ ಖೋಟಾ ನೋಟು ಮುದ್ರಿಸುವ ಪೇಪರ್‌ನ್ನು ಪೊಲೀಸರು ವಶ ಪಡೆದಿದ್ದಾರೆ.

 

By suddi9

Leave a Reply

Your email address will not be published. Required fields are marked *