ಬಂಟ್ವಾಳ : ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ವಿವಿಧ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ನಡೆಸುತ್ತಿರುವ ಬಡ, ಹಿಂದುಳಿದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸುಮಾರು 6.75 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿದ್ಯಾರ್ಥಿನಿ ನಿಲಯಕ್ಕೆ ಬುಧವಾರ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.1402pkt5(Revised)

ಅಜ್ಜಿಬೆಟ್ಟು ಗ್ರಾಮದ ಪಚ್ಚೇರು ಪಲ್ಕೆಯಲ್ಲಿ 150 ವಿದ್ಯಾರ್ಥಿನಿಯರಿಗಾಗಿ 3.38 ಕೋ.ರೂ. ವೆಚ್ಚ ದ ವಿದ್ಯಾರ್ಥಿ ನಿಲಯ ಹಾಗೂ ಆಲದಪದವುನಲ್ಲಿ 100 ವಿದ್ಯಾರ್ಥಿನಿಯರಿಗಾಗಿ 3.37 ಕೋ.ರೂ ವೆಚ್ಚದ ವಿದ್ಯಾರ್ಥಿನಿ ನಿಲಯಕ್ಕೆ ಸಚಿವರು ಶಿಲಾನ್ಯಾಸಗೈದರು.

ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ, ಗುತ್ತಿಗೆದಾರ ಅಮ್ಮು ರೈ ಹರ್ಕಾಡಿ, ರಾಜ್ಯ ಗೇರು ನಿಗಮ ನಿರ್ದೇಶಕ ಜಗದೀಶ ಕೊಯಿಲ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ನವೀನಚಂದ್ರ ಶೆಟ್ಟಿ, ಯುವರಾಜ ಆಳ್ವ, ಶ್ರೀಧರ ಜಿ.ಪೈ, ಗ್ರಾ.ಪಂ.ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಭೋಜರಾಜ ಶೆಟ್ಟಿ, ವಾಮದಪದವು ಸ.ಪ್ರ.ದ.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಧಾಕೃಷ್ಣ ಎಚ್.ಬಿ.,ಉಪನ್ಯಾಸಕ ಪೆÇ್ರ. ರೊನಾಲ್ಡ್ ಕೊರೆಯಾ, ಗ್ರಾ.ಪಂ ಸದಸ್ಯರಾದ ಆನಂದ ಆಚಾರ್ಯ, ಪ್ರೇಮಾ, ಶಾರದಾ,ಪ್ರಮುಖರಾದ ಭೋಜರಾಜ ಶೆಟ್ಟಿ ಕೊರಗಟ್ಟೆ, ಮೋಹನ ರೈ, ವೀರಪ್ಪ ಶೆಟ್ಟಿ, ಜಯಣ್ಣ, ಜಯಚಂದ್ರ ಬೊಳ್ಮಾರ್, ಜಯರಾಮ ಶೆಟ್ಟಿ ಗಂಟಾರಬೆಟ್ಟು,ಶಮೀರ್,ಸುರೇಂದ್ರ, ಪ್ರವೀಣ್ ಗಟ್ಟಿ , ಆನಂದಮೂಲ್ಯ, ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ಶಿವಣ್ಣ, ಮೇಲ್ವಿಚಾರಕಿ ಸೀತಾ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *