ಶಿರಸಿ: ಯುವಕನೋರ್ವ ನದಿಯ ಕೆಸರಿಗೆ ಸಿಲುಕಿ ಮೃತಪಟ್ಟ ಘಟನೆ ಇಲ್ಲಿನ ನದಿಯೊಂದರಲ್ಲಿ ನಡೆದಿದೆ.
ಬೆಳ್ಳಾರೆ ನೆಟ್ಟಾರಿ ನಿವಾಸಿ ಚಂದ್ರಶೇಖರ್ ಆಚಾರ್ಯ ಅವರ ಪುತ್ರ ಹರೀಶ್(26) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಹರೀಶ್ ಶಿರಸಿಯಲ್ಲಿ ಕ್ಯಾಂಪ್ಕೋ ಉದ್ಯೋಗಿಯಾಗಿದ್ದು, ಶಿವರಾತ್ರಿ ಪ್ರಯುಕ್ತ ತನ್ನ ಸ್ನೇಹಿತರೊಂದಿಗೆ ಅಲ್ಲಿಯ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ತೆರಳಿ ನದಿಯಲ್ಲಿ ಇಳಿದ ವೇಳೆ ಕೆಸರಿಗೆ ಸಿಲುಕಿ ಮೇಲೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
