yoga

ಮಂಗಳೂರು: ದಿ. ಕೆ. ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ, ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಮಂಗಳೂರು ಸಂಯುಕ್ತಾಶ್ರಯದಲ್ಲಿ ಫೆ. 25ರಂದು ನಗರದ  ಬಾಳಂ ಭಟ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ.

ಅಂದು ನಡೆಯುವ ಸ್ಪರ್ಧೆಯಲ್ಲಿ  ಮಕ್ಕಳು, ಪುರುಷರು ಮತ್ತು ಮಹಿಳೆಯರು ಸೇರಿದಂತೆ 12 ವಿಭಾಗಗಳನ್ನು  ಏರ್ಪಡಿಸಲಾಗಿದ್ದು, 14ರಿಂದ 50 ವರ್ಷ ಒಳಗಿನ ಸ್ಪರ್ಧೆ ಮತ್ತು 50 ವರ್ಷ ಮೇಲ್ಪಟ್ಟವರ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.

ಪ್ರತೀ ವಿಭಾಗದಲ್ಲಿ 5 ಬಹುಮಾನಗಳು ಮತ್ತು ವಿಜೇತರಿಗೆ ಚಾಂಪಿಯನ್‍ ಆಫ್‍ ಚಾಂಪಿಯನ್ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಸರ್ಧೆ ಉಚಿತ ನೋಂದಾಣಿಯಾಗಿದ್ದು, ಯೋಗಾಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ  ಶೇಖರ್‍ಕಡ್ತಲ ಅವರ ದೂ. 9480487081 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

 

 

 

By suddi9

Leave a Reply

Your email address will not be published. Required fields are marked *