ಬಂಟ್ವಾಳ: ಗ್ರಾಮ ಪಂಚಾಯತ್ ನ ವಿವಿಧ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗ್ರಾಮ ಪಂಚಾಯತ್ ನೊಂದಿಗೆ ಹೊಂದಣಿಕೆಯಿಂದ ಕೆಲಸ ಮಾಡುವಂತೆ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸೂಚಿಸಿದ್ದಾರೆ. ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿಎಸ್ ಆರ್ ವೈ ಸಭಾಂಗಧಲ್ಲಿ ತಾಲೂಕಿನ ಗ್ರಾಮ ಪಂಚಾಯತ್ ಅದ್ಯಕ್ಷರು, ಪಿಡಿಒ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಮೆಸ್ಕಾಂ ಸಮಸ್ಯೆ ಗಳ ಬಗ್ಗೆ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ನಿರ್ದೇನ ನೀಡಿದ್ದಾರೆ. ಗ್ರಾಮ ಪಂಚಾಯತ್ ಮೆಸ್ಕಾಂ ಬಿಲ್ ಪಾವತಿಸಿಲ್ಲ ಎಂದು ಮೆಸ್ಕಾಂ ಬಿಲ್ ನೀಡುವ ಹಿನ್ನಲೆಯಲ್ಲಿ ಪಂಚಾಯತ್ ನ ಅಭಿವ್ರದ್ದಿ ಕಾರ್ಯಕ್ಕೆ ಅಗುತ್ತಿರುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಈ ವಿಶೇಷ ಸಭೆ ಕರೆಯಲಾಗಿತ್ತು. 2015 ಎ.1 ರವರೆಗೆ ಗ್ರಾಮ ಪಂಚಾಯತ್ ನ ವಿದ್ಯುತ್ ಬಿಲ್ಲ್ ಮನ್ನಾ ಅಗಿದ್ದು, ಆ ಬಳಿಕಮೀಟರ್ ಜೀರೋ ಅಗುತ್ತದೆ.
ಆದರೆ ಮೆಸ್ಕಾಂ ಹಿಂದಿನ ಬಿಲ್ಲು ಸೇರಿಸಿ ಮೆಸ್ಕಾಂ ಬಿಲ್ಲ್ ನೀಡುತ್ತಿದೆ ಎಂದು ಬಹುತೇಕ ಗ್ರಾಮ ಪಂಚಾಯತ್ ಅಧ್ಯಕ್ಷರು ಸಭೆಯಲ್ಲಿ ಆರೋಪಿಸಿದರು. ಪಂಚಾಯತ್ ನೊಂದಿಗೆ ಹೊಂದಾಣಿಕೆ ಯಿಲ್ಲದೆ ಈ ಸಮಸ್ಯೆ ಉದ್ಬವವಾಗಲು ಕಾರಣ ಎಂದು ತಾ.ಪಂಮುಖ್ಯ ಕಾರ್ಯನಿರ್ವಾಣಾಧಿಕಾರಿ ರಾಜಣ್ಣ ತಿಳಿಸಿದರು. ಇಲಾಖೆ ಮಾಡಿದ ರೀಡಿಂಗ್ ವ್ಯತ್ಯಾಸ ವಾಗಿದೆ .
ಇಲಾಖೆ ರೀಡಿಂಗ್ ಮಾಡದೆ ಬಿಲ್ ನೀಡುತ್ತಿದೆ ಎಂದು ಪಂಚಾಯತ್ ಅಧ್ಯಕ್ಷರು ಸಭೆಯ ಗಮನ ಸೆಳೆದು ಹಾಗಾಗಿ ಪಂಚಾಯತ್ ಬಿಲ್ ಪಾವತಿ ಮಾಡಿಲ್ಲ ಎಂದರು. ಪಂಚಾಯತ್ ಪಂಪ್ ವಾರು ಮೀಟರ್ ರೀಡಿಂಗ್ ಮಾಡಿ ಪಂಚಾಯತ್ ಗೆ ಬಿಲ್ ನೀಡುವುದಿಲ್ಲ. ಪಂಚಾಯತ್ ಬಿಲ್ ಕಟ್ಟಿದ ಹಣ ಎಲ್ಲಿಗೆ ಹೋಗುತ್ತದೆ ಎನ್ನುವ ಆತಂಕ ಇದೆ. ಬಿಲ್ ಮನ್ನಾ ಅದ ಬಳಿಕ ಬಡ್ಡಿ ಜಿರೋ ಮಾಡಬೇಕಿತ್ತು ಆದರೆ ಅವರು ಮೈನಸ್ ಬಡ್ಡಿ ಹಾಕುತ್ತಿದ್ದಾರೆ ಎಂದು ಪಂಚಾಯತ್ ಅದ್ಯಕ್ಷಗಳು ಸಭೆಯಲ್ಲಿ ಆರೋಪಿಸಿದರು. ಈ ಬಗ್ಗೆ ಸ್ಷಷ್ಟನೆ ನೀಡುವಂತೆ ಅದ್ಯಕ್ಷ ಚಂದ್ರಹಾಸ ಕರ್ಕೇರ ಮೆಸ್ಕಾಂ ಇಲಾಖೆಗೆ ಸೂಚಿಸಿದರು. ಮುಂದಿನ ತಿಂಗಳಿನಿಂದ ಪಂಚಾಯತ್ ವ್ಯಾಪ್ತಿಯ ಸ್ಥಾವರ ವಾರು ವ್ಯತ್ಯಾಸ ಅಗಿದೆ ಎನ್ನುವುದರ ಬಗ್ಗೆಅಧಿಕೃತ ಬಿಲ್ ನೀಡುವಂತೆ ಇಒ ಮೆಸ್ಕಾಂ ಇಲಾಖೆ ಗೆ ತಾಕೀತು ಮಾಡಿದರು..
ವೇದಿಕೆ ಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿಸಮಿತಿ ಅದ್ಯಕ್ಷೆ ಧನಲಕ್ಮೀ ಸಿ. ಬಂಗೇರ ಉಪಸ್ಥಿತರಿದ್ದರು.