ಬಂಟ್ವಾಳ: ಶ್ರೀ ಗುಡ್ಡಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೇಮೋತ್ಸವ ಇಲ್ಲಿನ ಪೆರಾಜೆ ಗುತ್ತಿನ ಮನೆಯಲ್ಲಿ ಶುಕ್ರವಾರ ರಾತ್ರಿ ನಡೆಯಿತು.
ಫೆ.16 ರಂದು ಗೊನೆ ಕಡಿದು ಬಳಿಕ ಫೆ.22 ರ ರಾತ್ರಿ ಪೆರಾಜೆ ಗುತ್ತಿನ ಮನೆಯಿಂದ ಭಂಡಾರ ಬಂದು ಮಂಜೋಟ್ಟಿ ಗುಡ್ಡಚಾಮುಂಡಿ ದೈವಸ್ಥಾನ ದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ದಾರಿ ಮಧ್ಯೆ ವಿವಿಧ ಮನೆಯವರಿಂದ ಧರಿ ಸೇವೆ ಕೈಗೊಂಡು, ಪೆರಾಜೆ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ಸೇವೆ ಸಲ್ಲಿಸಿದ ನಂತರ ಸಾದಿಕುಕ್ಕು ದೇವಸ್ಥಾನ ದ ಸಮೀಪ ಮಾರಿ ಪೂಜೆ ನಡೆದು ಬಳಿಕ ಭಂಡಾರ ಗುಡ್ಡೆಚಾಮುಂಡಿ ದೈವದ ಆದಿ ಸ್ಥಳಕ್ಕೆ ಬಂದು ಧಾರ್ಮಿಕ ವಿಧಿವಿಧಾನಗಳ ಮೂಲಕ ಭಂಡಾರವೇರಿ ಶುಕ್ರವಾರ ರಾತ್ರಿ ವಿಜ್ರಂಭಣೆಯಿಂದ ಗುಡ್ಡ ಚಾಮುಂಡಿ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಅನುವಂಶಿಕ ಆಡಳಿತ ಮೋಕ್ತೇಶರರಾದ ಶ್ರೀಕಾಂತ ಆಳ್ವ ಪೆರಾಜೆ ಗುತ್ತು, ಜಯರಾಮ್ ರೈ, ಪ್ರಮುಖರಾದ ಬಿ.ಟಿ.ನಾರಾಯಣ ಭಟ್, ಕುಶಾಲ ಎಂ .ಪೆರಾಜೆ. ಶ್ರೀ ನಿವಾಸ ಪೆರಾಜೆ ಮತ್ತಿತರಿದ್ದರು.






