amith_sha

ಸುರಪುರ: ಹಿಂದೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಿಝಾಮರು ಕೆಟ್ಟ ಆಡಳಿತ ನೀಡಿ ಜನರನ್ನು ಹಿಂಸಿಸಿದ್ದರು. ಅದನ್ನು ಈಗಿನ ಸಿದ್ದರಾಮಯ್ಯ ಸರ್ಕಾರ ಅನುಸರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.

ಸುರಪುರದ ದಿವಳಗುಡ್ಡದಲ್ಲಿಯ ಸಜ್ಜನ ಮೈದಾನದಲ್ಲಿ ನಡೆದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಬಿಜೆಪಿ ಶಕ್ತಿ ಏನೆಂದು ಗೊತ್ತಿಲ್ಲ, ನಾವೆಲ್ಲ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಸರ್ಕಾರ  ರಚಿಸಿ ಶಕ್ತಿ ತೊರಿಸಬೇಕಿದೆ. ದೆಹಲಿಯಲ್ಲಿ ಕುಳಿತವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೆಚ್ಚು ಸೀಟು ಗೆಲ್ಲುವದಿಲ್ಲವೆಂದು ಮಾತನಾಡುತ್ತಾರೆ. ಆದರೆ ನಾವು ಅತಿಹೆಚ್ಚು ಸೀಟು ಗೆದ್ದು ಯಡಿಯೂರಪ್ಪ ನೇತೃತ್ವದ ಸರ್ಕಾರ ರಚಿಸುತ್ತೇವೆ. ಪ್ರತಿಯೊಬ್ಬ ಕಾರ್ಯಕರ್ತನು ದಿನದ ಇಪ್ಪತ್ನಾಲ್ಕು ಗಂಟೆಯು ವಿರಮಿಸದೆ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಸಂಕಲ್ಪ ಮಾಡಿ ಎಂದರು.

ರಾಜ್ಯದಲ್ಲಿರುವ ಸಿದ್ರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ  ಹೆಚ್ಚಿದೆ. 37885 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನುತಡೆಯದ ಸಿದ್ದರಾಮಯ್ಯ ಮೋದಿ ಸರ್ಕಾರ ರಾಜ್ಯಕ್ಕೆ ಏನು ಕೊಟ್ಟಿದೆ ಎಂದು ಕೇಳುತ್ತಾರೆ. ಆದರೆ ನೀವು ರಾಜ್ಯಕ್ಕೆ ಏನು ಕೊಟ್ಟಿದ್ದಿರಿ ಎಂದು ಸ್ಪಷ್ಟಪಡಿಸಿ ಎಂದರು.

ಸಿದ್ದರಾಮಯ್ಯನ ಸರ್ಕಾರ ರಾಜ್ಯವನ್ನುಅಭಿವೃದ್ಧಿಗೊಳಿಸದೆ ಬರೀ ಭ್ರಷ್ಟಾಚಾರ ಮಾಡಿದೆ. ಹಿಂದಿನ ಮನಮೋಹನ ಸಿಂಗ್ ಸರ್ಕಾರ  13ನೇ ಹಣಕಾಸು ಯೋಜನೆಯಡಿ 88583 ಕೋಟಿ  ರೂಪಾಯಿ ನೀಡಿದೆ. ಆದರೆ ಈಗಿನ ನರೇಂದ್ರ ಮೊದಿ ಸರಕಾರ 14ನೇ ಹಣಕಾಸು ಯೋಜನೆಯಡಿ 219406 ಕೋಟಿ ರೂಪಾಯಿ ನೀಡಿದೆ. ಆದರೆ ಆ ಹಣ ಎಲ್ಲಿ ಹೋಯಿತೆಂದರೆ. ರಾಜ್ಯದ ಅಭಿವೃಧ್ದಿಗೆ ಹಣ ಬಳಕೆಯಾಗದೆ, ಕಾಂಗ್ರೆಸ್ ನಾಯಕರ ಪ್ರತಿ ಹಳ್ಳಿಯಲ್ಲಿರುವ ಪತ್ರದ ಮನೆಗಳು ನಾಲ್ಕಂತಸ್ತಿನ ಕಟ್ಟಡವಾಗಲು, ಅವರ ಮನೆ ಮುಂದೆ ದೊಡ್ಡ ವಾಹನಗಳ ನಿಲ್ಲುಲು ಬಳೆಕೆಯಾಗಿದೆ ಎಂದು ರಾಜ್ಯ ಸರಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗ್ಗೆ 11ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಶಾ ಆಗಮನದ ವಿಳಂಬದಿಂದಾಗಿ ನಾಲ್ಕು ಗಂಟೆಗಳು ತಡವಾಗಿ ಆರಂಭವಾಗಿ, ಕೇವಲ ಇಪ್ಪತ್ತು ನಿಮಿಷದಲ್ಲಿ ಮುಗಿದು ಹೋಯಿತು. ನವಶಕ್ತಿ ಸಮಾವೇಶದಲ್ಲಿ ಪ್ರತಿ ಬೂತಿನ ಒಂಬತ್ತು ಜನರಂತೆ ಆಯ್ಕೆ ಮಾಡಿ ಮಾರ್ಗದರ್ಶನ ಮಾಡುವದಾಗಿ ಹೇಳಲಾಗಿತ್ತಾದರು, ಮಾರ್ಗದರ್ಶನದ ಬದಲಾಗಿ ಕೇವಲ ರಾಜ್ಯ ಸರಕಾರ ಮತ್ತು ಸಿದ್ದರಾಮಯ್ಯನವರ ವಿರುದ್ದ ಹರಿಹಾಯಲು ಮಾತ್ರ ಸೀಮಿತವಾದಂತೆ ಕಂಡಬಂತು.

ಕಾರ್ಯಕ್ರಮ ಆಯೋಜಿಸಿದ್ದ ರಾಜ್ಯ ಎಸ್ಟಿ ಘಟಕದಅಧ್ಯಕ್ಷ ಹಾಗು ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ವೇದಿಕೆ ಮೇಲೆ ಮುಖಂಡರಾದ ಸಂತೋಷಜಿ, ಅರುಣಕುಮಾರ, ಶಾಸಕ ಗುರು ಪಾಟೀಲ, ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ, ಜಿಲ್ಲಾ ಉಸ್ತುವಾರಿ  ಎನ್.ಶಂಕ್ರಪ್ಪ, ರಾಜಾ ಹನುಮಪ್ಪ ನಾಯಕ, ನಾಗರತ್ನಕುಪ್ಪಿ, ವೀರಬಸವಂತರಡ್ಡಿ ಮುದ್ನಾಳ, ಶರಣಭೂಪಾಲರಡ್ಡಿ, ಶ್ರೀಕಾಂತ ಸುಬೇದಾರ, ಅಮರಣ್ಣ ಹುಡೇದ, ಬಬ್ಲೂಗೌಡ ಇತರರು ಇದ್ದರು.

 

 

By suddi9

Leave a Reply

Your email address will not be published. Required fields are marked *