ಎಳವೆಯಲ್ಲಿಯೇ ಮಕ್ಕಳಿಗೆ ಜ್ಞಾನದ ಹಸಿವು ಇರಬೇಕು ಈ ಮೂಲಕ ನಮ್ಮ ಪರಂಪರೆ, ನಮ್ಮ ನಂಬಿಕೆಗಳ ಬಗ್ಗೆ ಅರಿವು ಮೂಡಲು ಸಾಧ್ಯ, ಮೂಢನಂಬಿಕೆಗಳೆಂದು ಮೂದಲಿಸುವವರಿಗೆ ಮೂಲನಂಬಿಕೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಷ್ಟು ಪ್ರಬುದ್ಧರಾಗಬೇಕು, ಪ್ರಕೃತಿಯೊಂದಿಗೆ ನಮ್ಮ ಸಂಸ್ಕøತಿ ಬೆಳೆದುಕೊಂಡು ಬಂದಿದೆ. ಇದನ್ನು ಮರೆತರೆ ವಿಕೃತಿಗೆ ಕಾರಣವಾಗುತ್ತದೆ. ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಶ್ರೀ ಮಾತಾನಂದಮಯಿ ಯವರು ಸುಮಾರು 800 ವರ್ಷಗಳ ಇತಿಹಾಸ ಪ್ರಸಿದ್ಧ ಶ್ರೀ ನಾಗರಕ್ತೇಶ್ವರಿ ಕ್ಷೇತ್ರ ನಾಣ್ಯ ಇದರ ಪ್ರತಿಷ್ಠಾ ವರ್ಧಂತಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಅಥಿತಿಗಳಾಗಿ ಭಾಗವಹಿಸಿದ ಶ್ರೀ ಮಹೇಂದ್ರನಾಥ ಸಾಲೆತ್ತೂರು ರವರು ಭೂತಾರಾಧನೆ, ನಾಗಾರಾಧನೆ ಬಗ್ಗೆ ಬಹಳಷ್ಟು ಮಾಹಿತಿ ನೀಡಿದರು.

IMG_6951
ವೇದಿಕೆಯಲ್ಲಿ ಅಭ್ಯಾಗತರು ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷರು, ಭಾ.ಜಾ.ಪ. ಮಂಗಳೂರು ಕ್ಷೇತ್ರ, ಲ| ಸುಧಾಕರ ಆಚಾರ್ಯ ಮಾರ್ನಬೈಲು ಅಧ್ಯಕ್ಷರು, ವಿಶ್ವಕರ್ಮ ಸಮಾಜ ಸೇವಾ ಸಂಘ,ಬಂಟ್ವಾಳ, ಶ್ರೀ ಗೋವಿಂದ ನಾಯಕ್ ಸುಜೀರು, ಅಧ್ಯಕ್ಷರಾದ ಪೂವಪ್ಪ ಬಂಗೇರ ನಾಣ್ಯ ಹಾಗೂ ಕೋಶಾಧಿಕಾರಿಯಾದ ಮನೋಜ್ ಆಚಾರ್ಯ ನಾಣ್ಯ, ಪ್ರಧಾನ ಕಾರ್ಯದರ್ಶಿಯಾದ ನಾಣ್ಯ ಮಾಧವ, ಉಪಾಧ್ಯಕ್ಷರುಗಳಾದ ಮುತ್ತಪ್ಪ ಮೂಲ್ಯ ನಾಣ್ಯ, ನಾರಾಯಣ ಬಂಗೇರ ಗಂಪದಕೋಡಿ, ಸೋಮಯ್ಯ ಮೂಲ್ಯ ನಾಣ್ಯ, ಜತೆ ಕಾರ್ಯದರ್ಶಿಗಳಾದ ಕೇಶವ ಕುಲಾಲ್ ನಾಣ್ಯ, ಭಾಸ್ಕರ ಕುಲಾಲ್ ನಾಣ್ಯ, ಸಲಹೆಗಾರರಾದ ಎಸ್. ಚಂದ್ರಶೇಖರ ಕೋಡಿ, ತುಂಬೆ, ಟಿ.ತಾರಾನಾಥ ಕೊಟ್ಟಾರಿ, ಭಾಸ್ಕರ ಚೌಟ ಕುಮ್ಡೇಲು, ಗೌರವಾಧ್ಯಕ್ಷರಾದ ಜಿ.ಜಿ. ಮೋಹನದಾಸ್ ಪ್ರಭು, ಅಧ್ಯಕ್ಷರಾದ ಟಿ. ತಾರಾನಾಥ ಕೊಟ್ಟಾರಿ, ಕಾರ್ಯದರ್ಶಿಯಾದ ಅರುಣ್ ಕುಮಾರ್ ನಾಣ್ಯ, ಉಪಾಧ್ಯಕ್ಷರಾದ ಮನೋಜ್ ಮಾರಿಪಳ್ಳ, ಶ್ರೀಧರ ನಾಣ್ಯ, ಕೋಶಾಧಿಕಾರಿಯಾದ ಜಗದೀಶ ನಾಣ್ಯ, ಜತೆ ಕಾರ್ಯದರ್ಶಿಗಳಾದ ಸುಕೇಶ್, ಸುದೇಶ್ ನಾಣ್ಯ, ಮನೀಶ್ ನಾಣ್ಯ, ನಿತೀಶ್ ನಾಣ್ಯ. ನೇಮೋತ್ಸವ ಸಮಿತಿ ಅಧ್ಯಕ್ಷರಾದ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು, ಮನೋಜ್ ಆಚಾರ್ಯ ನಾಣ್ಯ ವಂದಿಸಿದರು, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *