ಬೆಂಗಳೂರು : ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲಿನಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ ಪ್ರಕರಣದಲ್ಲಿ ಮಲ್ಯ ಆಸ್ಪತ್ರೆಯ ಸರ್ಜನ್ ಡಾ.ಆನಂದ್ ಬಂಧನಕ್ಕೆ ಸಿಸಿಬಿ ಸಜ್ಜಾಗಿದೆ.

ಯೆಸ್, ವಿದ್ವತ್ ಗೆ ಚಿಕಿತ್ಸೆ ನೀಡಿದ್ದ ಡಾ. ಆನಂದ್ ವೈದ್ಯಕೀಯ ವರದಿ ತಿರುಚಿದ ಕಾರಣಕ್ಕೆ ಇದೀಗ ಬಂಧನ ಭೀತಿ ಎದುರಾಗಿದ್ದು, ಸಹೋದರ ಪ್ರೇಮಕ್ಕೆ ಬಲಿಯಾದ ಆನಂದ್ ಸಿಸಿಬಿ ಅತಿಥಿಯಾಗುವ ಲಕ್ಷಣವಿದೆ. ಮಲ್ಯ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಆನಂದ್ ಬಂಧನಕ್ಕೆ ಸಿಸಿಬಿ ಸಜ್ಜಾಗಿದ್ದು, ಯಾವುದೇ ಸಂದರ್ಭದಲ್ಲೂ ಆನಂದ್ ಅವರನ್ನು ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಡಾ.ಆನಂದ್ ಅವರು ವಿದ್ವತ್ ಗೆ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ವೇಳೆಯಲ್ಲೇ ಕಾಂಗ್ರೆಸ್ ಶಾಸಕ ಹ್ಯಾರಿಸ್ ಜೊತೆ ಕೈಜೋಡಿಸಿದ್ದ ಡಾ.ಆನಂದ್ ಅವರು ಬಲವಂತವಾಗಿ ವಿದ್ವತ್ ನನ್ನು ಡಿಸ್ಚಾರ್ಜ್ ಮಾಡಿದ್ದರು. ವಿದ್ವತ್ ಚೆನ್ನಾಗಿಯೇ ಇದ್ದಾರೆ ಎಂದು ಶಾಸಕರಿಗೆ ಮೆಡಿಕಲ್ ರಿಪೋರ್ಟ್ ನೀಡಿದ್ದರು. ಅಷ್ಟೇ ಅಲ್ಲದೇ ವಿದ್ವತ್ ಗೆ ಜೀವಬೆದರಿಕೆ ಹಾಕಿದ್ದ ಡಾ. ಆನಂದ್ ಸೂಕ್ತ ಹೇಳಿಕೆ ನೀಡದಂತೆ ತಡೆದಿದ್ದರು.

ವಿದ್ವತ್ ಕುಟುಂಬಕ್ಕೂ ಕೂಡ ಈ ಬಗ್ಗೆ ಮಾತನಾಡದಂತೆ ಎಚ್ಚರಿಸಿದ್ದರು. ನಿನ್ನೆ ಹೈಕೋರ್ಟ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ವಿದ್ವತ್ ಪರ ವಕೀಲರು ಇದ್ದನು ಬಹಿರಂಗಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *