
ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನು ಸಿದ್ದರಾಮಯ್ಯ ಬದಲಿಗೆ ಸಿದ್ಧರಾವಣ ಎಂದು ಬದಲಿಸಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಸಿ.ಎಂ. ಅವರಿಗೆ ರಾವಣನ ಗುಣಗಳು ಹೆಚ್ಚಾಗಿವೆ. ಎಲ್ಲದಕ್ಕೂ ನಾನು, ನನ್ನದು, ನನ್ನಿಂದಲೇ ಎಂದು ರಾವಣ ಹೇಳುತ್ತಿದ್ದ. ಅದೇ ರೀತಿ ಸಿಎಂ ಹೇಳುತ್ತಿದ್ದಾರೆ. ಹಾಗಾಗಿ ಅವರು ಹೆಸರನ್ನು ಬದಲಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಯವರು ಮೈಸೂರು ಮಹಾರಾಜರಿಗೆ ತಮ್ಮನ್ನು ಹೋಲಿಸಿಕೊಂಡು ಉತ್ತಮ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮಹಾರಾಜರೇನು ಸ್ವಂತ ಹಣದಿಂದ ಮಾರ್ಕೇಟ್ ಕಟ್ಟಿರಲಿಲ್ಲ ಎಂದು ಹೇಳುವ ಸಿಎಂ ಅವರೇನು ಸ್ವಂತ ಹಣದಿಂದ ಕಟ್ಟಡ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಎಲ್ಲದಕ್ಕೂ ತಾವು, ತಮ್ಮಿಂದಲೇ ಎಂದು ಹೇಳುವ ಸಿಎಂ ಸಿದ್ಧರಾಮಯ್ಯ ಅವರ ದರ್ಪ ಇನ್ನೇನು ಕೊನೆಯಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.