umanath1june 2013 1

ಮಂಗಳೂರು: ಕರಿಂಜೆ‌ ಶ್ರೀಗಳ ವಿರುದ್ಧ ಏಕವಚನ ಬಳಕೆ, ಜಾಗ ಕಬಳಿಸಿದ‌ ಆರೋಪ ಮಾಡಿದ ಶಾಸಕ ಅಭಯಚಂದ್ರ  ಜೈನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲಿದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ‌ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರಿಂಜೆ ಶ್ರೀ ಸರಕಾರಿ ಜಾಗ ಕಬಳಿಸಿದ್ದಾರೆಂದು ಶಾಸಕ ಜೈನ್ ಆರೋಪಿಸಿದ್ದಾರೆ. ಆದರೆ ದೇವಸ್ಥಾನದ ಸಮಿತಿಯಲ್ಲಿ ಅಭಯಚಂದ್ರ ಜೈನ್ ಕೂಡಾ‌ ಸದಸ್ಯರು. ಶ್ರೀಗಳು ಒಂದು ಇಂಚು ಜಾಗ ಕಬಳಿಸಿದ್ದರೆ ತೋರಿಸಲಿ ಎಂದು ಸವಾಲೆಸೆದರು.

ಕರಿಂಜೆ  ಮುಕ್ತಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ರಾಮ ಹಾಗೂ ರಾವಣ ರಾಜ್ಯದ ಬಗ್ಗೆ ಪ್ರಸ್ತಾವಿಸಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಅಭಯಚಂದ್ರ ಜೈನ್ ಗೆ ರಾಕ್ಷಸ, ರಾವಣ ಎಂದಿಲ್ಲ. ಅಭಯಚಂದ್ರ ಜೈನ್ ಚೇಲಾಗಳು ಹೇಳಿದ ಮಾತನ್ನು ನಂಬಿ ಅವರು ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಜೈನ್ ಅವರು ಕರಿಂಜೆ ಶ್ರೀಗಳು ಚುನಾವಣೆಗೆ ನಿಲ್ಲುವಂತೆ ಸವಾಲು ಒಡ್ಡಿದ್ದಾರೆ. ತಾಕತ್ತಿದ್ದರೆ ಈ ಬಾರಿ ಅಭಯಚಂದ್ರ ಜೈನ್ ಚುನಾವಣೆಗೆ ಸ್ಪರ್ಧಿಸಲಿ. ಚುನಾವಣಾ ರಂಗದಿಂದ ಜೈನ್ ಓಡಬಾರದು ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *