150318_prakashraj (1)

ಕಾಸರಗೋಡು: ಸುಳ್ಳೇ ಬಿಜೆಪಿಯ ಬಂಡವಾಳವಾಗಿದ್ದು, ಅಧಿಕಾರಕ್ಕಾಗಿ ಯಾವ ರೀತಿಯ ಕುತಂತ್ರಕ್ಕೂ ಬಿಜೆಪಿ ಸಿದ್ಧವಾಗಿದೆ ಎಂದು ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಶಾಂತಿ ಸೇನಾ ಫೌಂಡೇಶನ್ ವತಿಯಿಂದ ಸಮಕಾಲೀನ ಸಂಕಟಗಳು ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋಮುವಾದ, ಸುಳ್ಳು ಹೇಳಿಕೆ, ಕೇವಲ ಭರವಸೆಯ ಭಾಷಣ ಮೂಲಕ ಹೆಚ್ಚು ದಿನ ಅಧಿಕಾರಕ್ಕೆ ಬರಲು ಜನತೆ ಅವಕಾಶ ನೀಡಬಾರದು. ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಯೋಗಿಗೆ ಜನತೆ ಬುದ್ಧಿ ಕಲಿಸತೊಡಗಿದ್ದರಿಂದ ಉಪ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿದೆ. ಯೋಗಿ ಮತ್ತು ಮೋದಿಯ ಸುಳ್ಳು ಭರವಸೆ ಜನರಿಗೆ ಅರ್ಥವಾಗತೊಡಗಿದೆ ಎಂದು ಕಿಡಿಕಾರಿದರು.

ಕಾವಿ ವಸ್ತ್ರತೊಟ್ಟು ಕೋಮುವಾದಿ ಧೋರಣೆಯನ್ನು ಪ್ರಚುರಪಡಿಸುವ ಉ.ಪ್ರ ಮುಖ್ಯಮಂತ್ರಿಯಿಂದ ಕಲಿಯುವುದು ಏನೇನೂ ಇಲ್ಲ. ಗಂಗಾ ನದಿ ಸ್ವಚ್ಛಗೊಳಿಸುತ್ತೇವೆಂದು ಭರವಸೆ ನೀಡಿದ್ದ ಕೇಂದ್ರ ಸರಕಾರ ಕೇವಲ ದಡವನ್ನಷ್ಟೇ ಸ್ವಚ್ಛಗೊಳಿಸಿದೆ ಎಂದವರು, ದೇಶದಲ್ಲಿ ಭ್ರಷ್ಟಾಚಾರಕ್ಕಿಂತ ಕೋಮುವಾದವೇ ಅಪಾಯಕಾರಿಯಾಗಿ ಪರಿಣಮಿಸಿದೆ. ಜಾತಿ ಅಳಿದರೆ ಮಾತ್ರ ಶಾಂತಿ ಸಾಧ್ಯ . ಆದರೆ ಬಿಜೆಪಿ -ಆರೆಸ್ಸೆಸ್ ಶಾಂತಿ ಕದಡಲು ಹೊರಟಿದೆ ಎಂದು ಆರೋಪಿಸಿದರು.

ಬಿಜೆಪಿಯನ್ನು ಸೋಲಿಸುವುದಷ್ಟೇ ನನ್ನ ಗುರಿ.  ಒಬ್ಬ ನಾಯಕನಾಗುವುದಕ್ಕಿಂತ ಒಬ್ಬ ಪ್ರಜೆ ಯಾಗಿ ಗುರುತಿಸಬೇಕಾಗಿದೆ. ನಮಗೆ ಪ್ರಶ್ನಿಸುವ ಹಕ್ಕು , ಮನಸ್ಸು, ಧೈರ್ಯ ಬೇಕಾಗಿದೆ. ಪ್ರಶ್ನಿಸುವವರನ್ನು ಬಾಯ್ಮಿಚ್ಚಿಸಲಾಗುತ್ತಿದೆ. ನಾವು ಒಟ್ಟಾಗಿ ಪ್ರಶ್ನಿಸಿದಾಗ ಮಾತ್ರ ಜನಪರ ಆಡಳಿತ ಲಭಿಸಲು ಸಾಧ್ಯ ಎಂದರು.

By suddi9

Leave a Reply

Your email address will not be published. Required fields are marked *