ಬಂಟ್ವಾಳ: ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ರವರು ಉಗ್ರಗಾಮಿಗಳಿದ್ದಂತೆ, ಅವರು ಯಾವ ಭಯೋತ್ಪಾದಕರಿಗೂ ಕಡಿಮೆ ಇಲ್ಲ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿರುದ್ಧ ಉಪವಿಭಾಗ ಪೋಲೀಸ್ ಉಪಧೀಕ್ಷಕರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ಕಮಿಟಿ ದೂರು ದಾಖಲಿಸಿದ್ದು, ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ, ನ್ಯಾಯವಾದಿ ಉಮಾಕರ್, ಇಲಿಯಾಸ್ ಉಪಸ್ಥಿತರಿದ್ದರು.
