ಬಂಟ್ವಾಳ: ಇಲ್ಲಿನ ಬಿ.ಕಸ್ಬಾ ಗ್ರಾಮದ ಸ್ಥಾಯಿ ಆದೇಶ 1017 ಪೋಲಿಸ್ ಬೀಟ್ ಸಭೆ ಬಂಟ್ವಾಳ ವೆಂಕಟರಮಣ ದೇವಳದ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಚುನಾವಣಾ ಸಂದರ್ಭ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಜವಬ್ದಾರಿಯ ಬಗ್ಗೆ ಪೊಲೀಸರು ಮಾಹಿತಿ ನೀಡಿದರು.
ಸಭೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್, ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕರಾದ ಚಂದ್ರಶೇಖರ್, ಹರೀಶ್, ಬೀಟ್ ಸಿಬ್ಬಂದಿಗಳಾದ ಮುರುಗೇಶ್, ಕೃಷ್ಣ, ಸುರೇಶ್, ವಿಶಾಲಾಕ್ಷೀ, ಧನ್ಯಶ್ರೀ ಮತ್ತು ರಾಘವೇಂದ್ರ ಹಾಜರಿದ್ದರು.


