hucha_110418-1 (1)

ಮಂಗಳೂರು: ನಾನು ಪ್ರಧಾನಿ ಹುದ್ದೆಗೇರುವ ಆಕಾಂಕ್ಷಿಯಾಗಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ ಹಾಕುವಂತೆ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಲ್ಲ, ಡ್ರಿಂಕ್ಸ್, ಸೀರೆ ಹಂಚಲ್ಲ . ಒಂದು ವೇಳೆ ಸೋತರು ಬೇಜಾರು ಇಲ್ಲ .ಆದರೆ ನನ್ನ ಸೋಲು ಜನರ ಸೋಲು. ಇಲ್ಲಿ ಸೋತರೂ ಎಂಪಿ ಚುನಾವಣೆಗೆ ನಿಲ್ಲುತ್ತೇನೆ. ಪ್ರಧಾನಿಯಾಗುತ್ತೇನೆ ಎಂದರು.

ಕರಾವಳಿಯ ಮೀನುಗಾರರು ಬಹಳಷ್ಟು ಸಮಸ್ಯೆಯಲ್ಲಿದ್ದಾರೆ. ಮೀನು ತಿನ್ನುವ ಒಂದು ವರ್ಗಕ್ಕಾಗಿ ಮೀನುಗಾರರು ತಮ್ಮ ಪ್ರಾಣವನ್ನು ಒತ್ತೆ ಇಡುವಂತಾಗಿದೆ. ಮೀನುಗಾರರು ತಮ್ಮ ವೃತ್ತಿ ತೊರೆದು ಕೃಷಿ ಮಾಡಿ ಎಂದು ಅವರು ಸಲಹೆ ನೀಡಿದರು.

By suddi9

Leave a Reply

Your email address will not be published. Required fields are marked *