ಮಂಗಳೂರು: ನಗರದ ಕಂಕನಾಡಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮಾರಿಗುಡಿ, ಬೆಂದೂರು ಮತ್ತು ಅತ್ತಾವರ, 33/11 ಕೆ.ವಿ. ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕುಡುಪಾಡಿ ಹಾಗೂ ಮಂಗಳಾದೇವಿ ಫೀಡರ್‌ಗಳಲ್ಲಿ ತುರ್ತು ವಿದ್ಯುತ್ ನಿರ್ವಹಣ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಎ. 12ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಕಮಿಷನರ್ ಆಫೀಸ್, ಎ.ಬಿ. ಶೆಟ್ಟಿ ಸರ್ಕಲ್, ಮಹಾಲಿಂಗೇಶ್ವರ ಟೆಂಪಲ್ ರೋಡ್, ಸರ್ವಿಸ್ ಬಸ್‌ಸ್ಟಾಂಡ್ ರೋಡ್, ಅಮೃತನಗರ, ರೊಸಾರಿಯೋ ಚರ್ಚ್ ರೋಡ್, ರಾಜಲಕ್ಷ್ಮೀ ಟೆಂಪಲ್ ರೋಡ್, ಗೂಡ್ಸ್ ಶೆಡ್, ಕಮಿಷನರ್ ಬಂಗ್ಲೋ, ಕಸಾಯಿಗಲ್ಲಿ, ಬೀಬೀ ಅಲಾಬಿ ರೋಡ್, ಅಜೀಜುದ್ದೀನ್ ರೊಡ್, ಜೈನ್ ಬಸ್ತಿ, ಚೇಂಬರ್ಸ್, ನೆಲ್ಲಿಕಾಯಿ ರೋಡ್, ಗೌರಿ ಮಠ, ಜೆ.ಎಂ. ರೋಡ್, ಸಿಟಿ ಬಸ್ ಸ್ಟ್ಯಾಂಡ್ , ಹಂಪನ್‌ಕಟ್ಟ ಸರ್ಕಲ್, ಮಾರ್ಕೆಟ್ ರೋಡ್, ಮಿನಿ ವಿಧಾನ ಸೌಧ, ಮಾರ್ಕೆಟ್ ರೋಡ್, ಹ್ಯಾಮಿಲ್ಟನ್ ಸರ್ಕಲ್, ನಿರೇಶ್ವಾಲ್ಯ ರೋಡ್, ಬದ್ರಿಯಾ ರೋಡ್, ಬದ್ರಿಯಾ 3ನೇ ಕ್ರಾಸ್, ಸೆಂಟ್ರಲ್ ಟಾಕೀಸ್, ಶರವು, ದೇವಸ್ಥಾನ, ಹೊಟೇಲ್ ಶ್ರೀನಿವಾಸ್, ಓಲ್ಡ್ ಸರ್ವಿಸ್ ಬಸ್‌ಸ್ಟಾಂಡ್, ವೆನ್ಲಾಕ್ ಆಸ್ಪತ್ರೆ, ಪಂಪ್‌ವೆಲ್, ವೆಲೆನ್ಸಿಯಾ, ನಂದಿಗುಡ್ಡ, ಗೋರಿಗುಡ್ಡ, ಉಜ್ಜೋಡಿ, ಜೆಪ್ಪು, ಮಜಿಲ, ಸೂಟರ್‌ಪೇಟೆ, ಎಕ್ಕೂರು, ನೆಹರೂರೋಡ್, ಮಂಗಳಾನಗರ, ಸುಭಾಸ್‌ನಗರ, ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ, ಮಂಕಿಸ್ಟಾಂಡ್, ಮಂಗಳಾದೇವಿ, ಬೆಂದೂರು, ಇಎಸ್‌ಐ ರಸ್ತೆ, ಬೆಂದೂರುವೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಎ.13ರಂದು ವಿದ್ಯುತ್ ಕಡಿತ: ಕದ್ರಿ ಉಪಕೇಂದ್ರದಲ್ಲಿ ಹೊರಡುವ ಎಲ್ಲ 11ಕೆ.ವಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎ. 13ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಮಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟನೆ ತಿಳಿಸಿದೆ.
