pilikulanisargadhama-23-1458729540-23-1461403411

ಮಂಗಳೂರು: ಪಿಲಿಕುಳದ ಗುತ್ತುಮನೆಯಲ್ಲಿ ಎ. 14 ರಂದು ಬಿಸುಪರ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 10ಕ್ಕೆ ಬಿಸುಕಣಿ ಇಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಮಧ್ಯಾಹ್ನ 12.30 ರಿಂದ ಬಿಸುಪರ್ಬದ 26 ಬಗೆಯ ವಿಶೇಷ ಖಾದ್ಯಗಳ ಸಸ್ಯಹಾರಿ ಭೋಜನದ ವ್ಯವಸ್ಥೆ ಇದೆ.

ಬಿಸುಪರ್ಬದ ಅಂಗವಾಗಿ ತಾರಾಲಯದಲ್ಲಿ ಅತ್ಯಾಕರ್ಷಕ ಹೊಸ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಇದರ ಪ್ರಯೋಜನವನ್ನು ಪಡೆಯಲು ರೂ.300/- ರ ಪ್ಯಾಕೇಜ್ ಕೂಪನ್‍ಗಳನ್ನು ಮುಖ್ಯದ್ವಾರದ ಬಾಕ್ಸ್ ಆಫೀಸಿನಲ್ಲಿ ಮುಂಚಿತವಾಗಿ ಪಡೆಯಬಹುದು ಹಾಗೂ ಈ ಭೋಜನದ ಕೂಪನ್‍ಗಳನ್ನು ಪಡೆದವರು ಎ. 14 ರಂದು ಪಿಲಿಕುಳದ ಎಲ್ಲಾ ಆಕರ್ಷಣೆಗಳಿಗೆ ಪ್ರವೇಶವನ್ನು ಕೂಡಾ ಪಡೆಯಬಹುದು ಎಂದು ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *