images

ಮಂಗಳೂರು: ಯುವಕನನ್ನು ಅಪಹರಿಸಿ ಮೊಬೈಲ್ ಹಾಗೂ ಬೈಕ್ ಸುಲಿಗೆ ಮಾಡಿ ಹಣಕ್ಕಾಗಿ ಕೊಲೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು  ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.

ಪಡೀಲ್ ನ ಅಳಪೆ ಗಾಣದ ಬೆಟ್ಟು ನಿವಾಸಿ  ದೀರಾಜ್ ಕುಮಾರ್  ಧೀರು (23), ವಾಮಂಜೂರು ನಿವಾಸಿ ಪ್ರಾಣೇಶ್ ಪೂಜಾರಿ (21), ಕಣ್ಣೂರು ನಿವಾಸಿ ನೀಕ್ಷಿತ್ ಪೂಜಾರಿ (21), ಬಜಾಲ್ ನ  ಪ್ರೀತಮ್ ಜಲ್ಲಿಗುಡ್ಡೆ ಜಯನಗರ ಗ್ರಾಮದ     ಪ್ರೀತಮ್ ಪೂಜಾರಿ, ಅರ್ಕುಳ ಗ್ರಾಮದ ನೀತಿನ್ ಪೂಜಾರಿ (20)  ಬಂಧಿತರು ಎಂದು ಗುರುತಿಸಲಾಗಿದೆ.

ಏನಿದು ಘಟನೆ:  ಎ.15 ರಂದು ಜಲ್ಲಿಗುಡ್ಡೆ ಜಯನಗರ ನಿವಾಸಿ ಗ್ಲಾನ್ ಸನ್ ಎಂಬಾತನನ್ನು ಬಂಧಿತ ಆರೋಪಿಗಳು  ಬಿಕರ್ನಕಟ್ಟೆಯಿಂದ ದ್ವಿಚಕ್ರ ವಾಹನದಲ್ಲಿ ಬಲತ್ಕಾರವಾಗಿ ಕುಳ್ಳಿರಿಸಿಕೊಂಡು  ಆತನ ಬೈಕ್ ನ್ನು ತೆಗೆದುಕೊಂಡು  ಅಡ್ಯಾರಿನ ರೈಲ್ವೇ ಟ್ರಾಕ್ ಬಳಿ ಕರೆದುಕೊಂಡು ಹೋಗಿ ಹಣ ಕೊಡುವಂತೆ ಒತ್ತಾಯಿಸಿ 15,000 ರೂ. ಮೌಲ್ಯದ ಮೊಬೈಲನ್ನು ಕಸಿದುಕೊಂಡು ಆರೋಪಿಗಳು ಯುವಕನಿಗೆ ಚೂರಿ ತೋರಿಸಿ ಬೆದರಿಸಿ ಮನೆಯವರಿಗೆ ಪೋನ್ ಮಾಡಿ 1 ಲಕ್ಷ ರೂ. ಕೊಡುವಂತೆ ಕೊಲೆ ಯತ್ನ ನಡೆಸಿ ಅಲ್ಲಿಂದ  ನೀರ್ ಮಾರ್ಗ ಕೇಲ್ರಾಯ್ ಗೆ ಕರೆದುಕೊಂಡು ಹೋಗಿ ಹಲ್ಲೇ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕದ್ರಿ ಪೊಲೀಸರು ಆರೋಪಿಗಳನ್ನು ಬಂಧಿಸಿ 15.000 ರೂ. ಮೊಬೈಲ್,  50,000 ರೂ. ಮೌಲ್ಯದ  ಬೈಕ್ ಹಾಗೂ  ಕೃತ್ಯಕ್ಕೆ ಉಪಯೋಗಿಸಿದ  ಎರಡು ದ್ವಿ ಚಕ್ರ ವಾಹನಗಳನ್ನು  ವಶಪಡಿಸಿ ಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಮಾರುತಿ ಜಿ ನಾಯಕ,  ಪಿಎಸ್ಸೈ ನೀತು ಆರ್ ಗುಡೆ ಹಾಗೂ ಸಿಬ್ಬಂದಿ ವೆಂಕಟೇಶ್, ಜಯಾನಂದ, ಉಮೇಶ್, ಗಿರೀಶ್  ಜೋಗಿ, ಅಜೀತ್ ಮ್ಯಾಥ್ಯೂ,ರಾಘವೇಂದ್ರ, ಬಿರೇಂದ್ರ, ಹನುಮಂತ, ಹಾಗು ಮನೋಜ್ ಕಂಪ್ಯೂಟರ್ ಸೇಕ್ಷನ್ ರವರು ಆರೋಪಿಗಳ  ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *