ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರವನ್ನು ಮೇ 27ರಂದು ಆಡ್ಯಾರ್ ಗಾರ್ಡನ್ನಲ್ಲಿ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇದರ ಪೂರ್ವಭಾವಿ ಸಭೆ ನಗರದ ಓಶಿಯನ್ ಪರ್ಲ್ಸ್ ಹೋಟೆಲ್ನಲ್ಲಿ ಗುರುವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕಳೆದ ವರ್ಷ ಕಟೀಲು ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಕುಬಣೂರು ಶ್ರೀಧರ ರಾವ್ ನಿಧನರಾಗಿದ್ದು, ಇದೀಗ ಅವರ ಸ್ಮರಣಾರ್ಥ ಅವರ ಕುಟುಂಬಸ್ಥರಿಗೆ ಮರಣೋತ್ತರ ಪ್ರಶಸ್ತಿಯ ಜತೆಗೆ 25 ಸಾವಿರ ರೂ. ನೀಡಲಾಗುವುದು ಎಂದರು.
ಮೇ 27ರಂದು ನಡೆಯುವ ಸಮಾರಂಭದಲ್ಲಿ ಪಟ್ಲ ಪ್ರಶಸ್ತಿ, ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿಯ ಜತೆಗೆ ಈ ವರ್ಷ ಮರಣೋತ್ತರ ಪ್ರಶಸ್ತಿಯನ್ನು ನೀಡುವ ಬಗ್ಗೆ ಒಮ್ಮತದಿಂದ ಇದೇ ವೇಳೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕತಾರ್ ಘಟಕದ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲ್, ಪ್ರಭಾಕರ ಜೋಶಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ , ಸವಣೂರು ಸೀತಾರಾಮ ರೈ, ಭುಜಬಲಿ, ನಿತ್ಯಾನಂದ ಶೆಟ್ಟಿ, ಡಾ. ಮನುರಾವ್, ಸಿ.ಎ.ಸುದೇಶ್ ಕುಮಾರ್, ಆರತಿ ಆಳ್ವ ,ಜಯಶೆಟ್ಟಿ ಪಡುಬಿದ್ರಿ, ಸತೀಶ್ ಶಟ್ಟಿ ವಾಮಂಜೂರು, ಪ್ರೇಮನಾಥ್ ಶೆಟ್ಟಿ ಪಡುಬಿದ್ರಿ, ಗೋಪಾಲ ಶೆಟ್ಟಿ ಕಾರ್ಕಳ, ರಾಜೀವ್ ಪೂಜಾರಿ ಕೈಕಂಬ, ಜಗದೀಶ್ ಶೆಟ್ಟಿ ಉಪ್ಪಿನಂಗಡಿ ಪ್ರದೀಪ್ ಆಳ್ವ , ಗಿರೀಶ್ ಶೆಟ್ಟಿ ಕಟೀಲ್, ಪಿ.ಡಿ. ಶೆಟ್ಟಿ, ಸಂತೋಷ್ ಶೆಟ್ಟಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.
