ಮಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಸೇವಾದಲ್ ಜಿಲ್ಲಾ ಮುಖ್ಯಸ್ಥ ಆಶ್ರಫ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ, ಎನ್ ಎಸ್ ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಯುವ ಕಾಂಗ್ರೆಸ್ ಮಿಲಾಗ್ರೀಸ್ ವಾರ್ಡ್ ಅಧ್ಯಕ್ಷ ತೌಫೀಕ್, ವಲಯಾದ್ಯಕ್ಷ ಗಣೇಶ್ ಶೆಟ್ಟಿ, ಹಾಶಿರ್ ಮೊಯ್ದೀನ್, ಹಸ್ಸನ್ ಮನ್ನಾನ್, ನಿಷಾದ್ ಎಮ್ಮೆಕ್ಕೆರೆ ಉಪಸ್ಥಿತರಿದ್ದರು.
