ಮಂಗಳೂರು: ಸಬ್ಜೈಲಿನಲ್ಲಿ ಖೈದಿಗಳು ಹೊಡೆದಾಡಿಕೊಂಡ ಘಟನೆ ನಗರದ ಕೊಡಿಯಾಲ್ ಬೈಲ್ ನಲ್ಲಿನ ಸಬ್ ಜೈಲಿನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಈ ಸಂದರ್ಭ ಗಲಾಟೆ ತಡೆಯಲೆಂದು ಮಧ್ಯ ಪ್ರವೇಶಿದ ಜೈಲು ಅಧೀಕ್ಷಕರು ಹಾಗೂ ಮೂವರು ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಜೈಲು ಅಧೀಕ್ಷಕ ಪರಮೇಶ್ವರ್, ಸಿಬ್ಬಂದಿ ರಮೇಶ್ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
.
