22-1

ಮಂಗಳೂರು: ಯಕ್ಷಗಾನ ಕಲಾಕೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸುಮಾರು 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ “ಪಟ್ಲ ಸಂಭ್ರಮ” ಮೇ 27ರಂದು ಅಡ್ಯಾರ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಎಂದು ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

ಮಂಗಳವಾರ ನಗರದ ಬಲ್ಮಠದಲ್ಲಿರುವ ಕುಡ್ಲ ರೆಸ್ಟೋರೆಂಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಕಾರ್ಯಕ್ರಮ ಬೆಳಗ್ಗೆ 8ರಿಂದ ರಾತ್ರಿ 12ರ ವರೆಗೆ ನಡೆಯಲಿದ್ದು, ಬೆಳಗ್ಗೆ 8ರಿಂದ ಚೌಕಿ ಪೂಜೆ, ಅಬ್ಬರ ತಾಳ, 9ರಿಂದ ಚೆಂಡೆ ಜುಗಲ್ ಬಂದಿ- ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ, 9.45ರಿಂದ ಉದ್ಘಾಟನಾ ಸಮಾರಂಭ, 10ರಿಂದ 2ರ ವರೆಗೆ ಟ್ರಸ್ಟಿನ ಸದಸ್ಯರಯ ಹಾಗೂ ಯಕ್ಷಭಿಮಾನಿಗಳಿಂದ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರು ಹಾಗೂ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸನೆ ಹಾಗೂ ಉಚಿತ ಜೌಷಧಿ ವಿತರಣೆ, ಬೆಳಗ್ಗೆ 11ರಿಂದ ಯಕ್ಷಸಪ್ತಸ್ವರ ಗಾನವೈಭವ, ಮಧ್ಯಾಹ್ನ ಗಂಟೆ 1ರಿಂದ ಮಹಿಳಾ ಯಕ್ಷಗಾನ, 2.30ರಿಂದ 4ರವರೆಗೆ ತಾಳಮದ್ದಳೆ-ಅಗ್ರಪೂಜೆ, 4ರಿಂದ ಬಾಲಕಲಾವಿದೆಯಿಂದ ಯಕ್ಷಗಾನ ನೃತ್ಯ, 4.15ರಿಂದ 5.15ರ ವರೆಗೆ ಯಕ್ಷಮಿತ್ರರು ದುಬೈ ಮಕ್ಕಳ ತಂಡದಿಂದ ಯಕ್ಷಗಾನ ಏಕದಶಿ ಮೃತ ಮಹಾತ್ಮೆ ನಡೆಯಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಛಂದೋಬ್ರಹ್ಮ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ 1ಲಕ್ಷ ನಗದು ಹಾಗೂ ಪಟ್ಲ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಅಲ್ಲದೆ, ವೃತ್ತಿ ಕಲಾವಿದರಾದ ಕುರಿಯ ಗಣಪತಿ ಶಾಸ್ತ್ರಿ, ಶ್ರೀ ಆರ್ಗೋಡು ಮೋಹನ್ ದಾಸ್ ಶೆಣೈ, ಎಂ.ಕೆ.ರಮೇಶ್ ಆಚಾರ್ಯ, ಆನಂದ ಶೆಟ್ಟಿ ಐರಬೈಲು, ಹವ್ಯಾಸು ಕಲಾವಿದರಿಂದ ಕುತ್ತೊಟ್ಟು ವಾಸು ಶೆಟ್ಟಿ ಮತ್ತು ಮಹಾಲಕ್ಷ್ಮೀ ಡಿ.ರಾವ್ ಅವರಿಗೆ ಯಕ್ಷಧ್ರುವ ಕಲಾ ಗೌರವ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಬಾ ಪುರಸ್ಕಾರ, ಎಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಗಳಿಸಿದ ಮಕ್ಕಳಿಗೆ ಬಂಗಾರದ ಪದಕ ನೀಡಿ ಗೌರವಿಸಲಾಗುವುದು ಎಂದ ಅವರು, ಇನ್ನೂ ಕಾರ್ಯಕ್ರಮಕ್ಕೆ ವಿಶೇಷ ತಾರಾ ಮೆರುಗು ತುಂಬಲು ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಆಗಮಿಸಲಿದ್ದಾರೆ ಎಂದು ತಿಳಿಸಿದರು. ನವನೀತ್ ಶೆಟ್ಟಿ,

By suddi9

Leave a Reply

Your email address will not be published. Required fields are marked *