c069f406-9457-4be5-8940-f4301bd1511f

ಮಣ್ಣಗುಡ್ಡೆ: ಗುರ್ಜಿ ಸೇವಾ ಸಮಿತಿ ಟ್ರಸ್ಟ್ ಇದರ 150 ನೇ ವರ್ಷದ ಶರವು ಮಹಾಗಣಪತಿ ದೇವರ ದೀಪಾರಾಧನೆ ಸಂಭ್ರಮಾಚರಣೆಯ ಮನವಿ ಪತ್ರ ಮತ್ತು ಕಾರ್ಯಕ್ರಮದ ಲಾಂಛನವನ್ನು ಶರವು ಮಹಾಗಣಪತಿ ದೇವಸ್ಥಾನದ  ಶಿಲೆಶಿಲೆ ಮೊಕ್ತೇಸರರಾದ ಶರವು ರಾಘವೇಂದ್ರ ಶಾಸ್ತ್ರಿ ಬಿಡುಗಡೆ ಗೊಳಿಸಿದರು.

ಈ ವೇಳೆ ನಳಿನಿ ಮೋಹನ್ ಸಮಿತಿಯ ವರದಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ಮಹಾಬಲೇಶ್ವರ, ಉದ್ಯಮಿ ಬಿ.ಆರ್. ಸೋಮಯಾಜಿ, ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೋ.ಎಂ.ಬಿ.ಪುರಾಣಿಕ್, ಸಮಿತಿಯ ಅಧ್ಯಕ್ಷ ರಮೇಶ ಭಟ್, ಡಾ.ರಾಘವೇಂದ್ರ ಭಟ್, ಕಾರ್ಯಾಧ್ಯಕ್ಷರಾದ ಬಿ.ವಾಸುದೇವ ರಾವ್ , ಪ್ರಕಾಶ ರಾವ್ ಕಲ್ಬಾವಿ, ಗೌರವ ಕಾರ್ಯದರ್ಶಿ ಸುಧಾಕರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಾದರ್ಶಿ ಭಾರ್ಗವ ತಂತ್ರಿ ವಂದಿಸಿದರು. ವೆಂಕಟೇಶ ರಾವ್,ಮೋಹನ ರಾವ್,ರಾಜೇಂದ್ರ ಕಲ್ಬಾವಿ, ಶ್ರೀಮತಿ ಜೇಷ್ಠಲಕ್ಷ್ಮೀ , ಮನೋರಮ ಉಮೇಶ್, ಬಾಲಕೃಷ್ಣ,ನಿತ್ಯಾನಂದ ಕಾರಂತ,ಪಿ.ರಾಮಮೂರ್ತಿ ರಾವ್, ನಾಗೇಶ ಕಾರ್ಯಕ್ರಮದಲ್ಲಿ ಸಹಕರಿಸಿದರು.ec5703b3-46df-4210-8ffc-4be742d630fd

 

 

 

By suddi9

Leave a Reply

Your email address will not be published. Required fields are marked *