ಗುರುಪುರ-ಕೈಕಂಬ: ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ಮೃತರನ್ನು ಮೂಡುಪೆರಾರ ಮುರ ನಿವಾಸ ಕ್ರಷ್ಣಪ್ಪಿ ಗೌಡ ಅವರ ಪುತ್ರ ರಮೇಶ್ ಗೌಡ (47) ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ರಮೇಶ್ ಅವರ ಸಾವಿಗೆ ವಿಪರೀತ ಕುಡಿತದ ಚಟ ಕಾರಣವೆಂದು ಶಂಖೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
