ಪೊಳಲಿ: ದೇವಸ್ಥಾನದ ಕೊಡಿಮರ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತಾಲೂಕಿನ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮೊರೆ ಹೋಗಿ ಕಣ್ಣೀರು ಹಾಕಿದ್ದಾರೆ.
ರಾಜರಾಜೇಶ್ವರಿ ದೇವಸ್ಥಾನದ ಎದುರು ಕೊಡಿ ಮರವೊಂದನ್ನು (ಧ್ವಜಸ್ತಂಭ) ಪ್ರತಿಷ್ಠಾಪಿಸಲಾಗಿದ್ದು, ಈ ಧ್ವಜಸ್ತಂಭಕ್ಕಾಗಿ ಕೊಡಗಿನ ಸಂಪಾಜೆ ಎಂಬ ಅರಣ್ಯದಿಂದ ಮರವನ್ನು ಕಡಿದು ದೇವಸ್ಥಾನಕ್ಕೆ ತರಲಾಗಿತ್ತು. ಈ ಸಂದರ್ಭದ ಅವಧಿಯಲ್ಲಿ ರೈ ಅವರು ಪೊಳಲಿ ಕ್ಷೇತ್ರದ ಗೌರವಧ್ಯಕ್ಷರಾಗಿದ್ದರು.
ಆದರೆ ಇದೀಗ ಈ ಕೊಡಿಮರ ವಿಚಾರದಲ್ಲಿ ಅಪಸ್ವರ ಕೇಳಿ ಬಂದಿದ್ದು, ಅರಣ್ಯ ಇಲಾಖೆ ಮರಕ್ಕೆ ಶುಲ್ಕ ವಿಧಿಸಿದ್ದರಿಂದ ಹಿಂದೂ ಸಂಘಟನೆಯ ಕಾರ್ಯಕರ್ತರು ರಮಾನಾಥ ರೈ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿಸಿ, ಅವರ ರೈ ವಿರುದ್ಧ ಅಪಪ್ರಚಾರ ನಡೆಸಿದ್ದರು.
ಇದರಿಂದ ಮನ ನೊಂದ ರಮಾನಾಥ ರೈ, ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿ ರೈ, ಕೊಡಿಮರದ ವಿಷಯದಲ್ಲಿ ನಾನೇನು ತಪ್ಪು ಮಾಡಿಲ್ಲ. ಆದರೂ ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ಪ್ರಾರ್ಥನೆಯಲ್ಲಿ ಕಣ್ಣೀರು ಹಾಕಿದ್ದಾರೆ.
