ವಾಮಂಜೂರು: ಕಲೆಯಲ್ಲಿ ಜಾತಿ-ಧರ್ಮ ಮೀರಿದ ವಿಷಯ ಅಡಕವಾಗಿದೆ. ನಾವೆಲ್ಲರೂ ಪರಸ್ಪರ ಅನ್ಯೋನ್ಯವಾಗಿದ್ದರೆ ಕಲೆಗಳಿಂದ ಉತ್ತಮ ಶಿಕ್ಷಣ ಹಂಚಿಕೊಳ್ಳಲು ಸಾಧ್ಯವಿದೆ. ಭವಿಷ್ಯದ ಪೀಳಿಗೆಗೆ ಯಕ್ಷಗಾನ ಮುಂದುವರಿಯಬೇಕು ಎಂದು ವಾಮಂಜೂರು ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರು ರೆ. ಫಾ. ಸಿಪ್ರಿಯನ್ ಪಿಂಟೋ ಹೇಳಿದರು.

ವಾಮಂಜೂರಿನ ಚರ್ಚ್ ಸಭಾಗೃಹದಲ್ಲಿ ಆ. 12ರಂದು ಯಕ್ಷಾಮೃತ ವಾಮಂಜೂರು ಆಯೋಜಿಸಿದ ಎರಡನೇ ವರ್ಷದ ಐದು ದಿನಗಳ `ಯಕ್ಷ ವೈಭವ’ದ ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು.gur-aug-13-r. f. siprian pinto

ಯಕ್ಷಗಾನ ನಾಟ್ಯ, ತಾಳ, ಮಾತುಗಾರಿಕೆ ಒಳಗೊಂಡ ಸರ್ವಾಂಗೀಣ ಕಲೆ. ಇದು ಪಂಚೇಂದ್ರಿಯಕ್ಕೆ ಉತ್ತೇಜನ ನೀಡಿ, ಮನಸ್ಸು ಮದಗೊಳಿಸುವ ಕಲೆ. ಯಕ್ಷಗಾಮೃತದ ಯಕ್ಷವೈಭವ ಹರಿಯುವ ನೀರಾಗಲಿ ಎಂದು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಆಡಳಿತ ಮೊಕ್ತೇಸರ ನರಸಿಂಹ ತಂತ್ರಿ ಆಶೀರ್ವಚನ ನೀಡಿದರು.

ಯಕ್ಷಗಾನದಿಂದ ಮನಸ್ಸಿನ ಗೊಂದಲ ನಿವಾರಣೆಯಾಗುತ್ತದೆ. ಕಲೆಗಳಲ್ಲಿ ಯಕ್ಷಗಾನ ಉತ್ಕøಷ್ಟವಾದ ಕಲೆ. ಇದನ್ನು ನೋಡಿ ಆನಂದಿಸದವರು ಯಾರೂ ಇಲ್ಲ. ಮುಂದಿನ ವರ್ಷ ಏಳು ದಿನಗಳ ಯಕ್ಷ ವೈಭವ ನಡೆಯಲಿ ಎಂದು ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ವೆಂಕಟರಮಣ ಆಸ್ರಣ್ಣ ಶುಭ ನುಡಿದರು.gur-aug-13-ammunje sanmana-1

ಸನ್ಮಾನಕ್ಕುತ್ತರವಾಗಿ ಅಭಿಮಾನ ಮಾತನ್ನಾಡಿದ ಯಕ್ಷ ಕಲಾವಿದ ಅಮ್ಮುಂಜೆ ಮೋಹನ ಕುಮಾರ್, ಹಿಂದೆ ಯಕ್ಷಗಾನಕ್ಕೆ ರಾಜಾಶ್ರಯವಿತ್ತು. ಈಗ ಕಲಾ ಪೋಷಕರೇ ಯಕ್ಷಗಾನದ ಜೀವಾಳ, ಶ್ರೀರಕ್ಷೆ. ನನಗೆ ಯಕ್ಷಗಾನ ವೃತ್ತಿಯಾಗಿದ್ದು, ಕಲಾಭಿಮಾನಿಗಳ ಬಲದಿಂದ ನಾನಿಂದು ಇಷ್ಟೆತ್ತರಕ್ಕೆ ಬೆಳೆದಿದ್ದೇನೆ ಎಂದರು.

ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡುತ್ತ, ಯಕ್ಷಗಾನದ ಮೂಲಕ ಸಂಸ್ಕøತಿಯ ದಾಸೋಹ ನಡೆಯುತ್ತಿದೆ. ಈ ಕಲೆ ದಕ್ಷಿಣ ಕನ್ನಡದಿಂದ ವಿಶ್ವಕಲೆಯಾಗಿ ಬೆಳೆಯುತ್ತಿದೆ. ಇದರಲ್ಲಿ ಸ್ತರಗಳ ಪ್ರಶ್ನೆ ಇಲ್ಲ. ಈ ಕಲೆಯಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ ಎಂದು ಹೇಳಿದರು.gur-aug-13-raghavendra bhat-karnataka bank

ಕರ್ಣಾಟಕ ಬ್ಯಾಂಕಿನ ಅಧಿಕಾರಿ ರಾಘವೇಂದ್ರ ಭಟ್ಟರಿಗೆ ವಿಶೇಷ ಸನ್ಮಾನ ನೀಡಲಾಯಿತು. ಸಭಾಧ್ಯಕ್ಷ ಮೇಯರ್ ಭಾಸ್ಕರ್ ರಾಮ್ ಯಕ್ಷಾಮೃತ ಸಂಘಟನೆಯ ಯಕ್ಷ ವೈಭವ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಕ್ಷಾಮೃತ ಗೌರವಾಧ್ಯಕ್ಷ ಓಂಪ್ರಕಾಶ ಶೆಟ್ಟಿ ವಾಮಂಜೂರು, ಮನೀಷ್ ಕರ್ಕೇರ(ಯುಎಇ), ಮೋಹನ ಅಮೀನ್(ವಿಜಯವಾಹಿನಿ), ಜಯಪ್ರಕಾಶ ವಾಮಂಜೂರು(ಜೆಪಿ-ಮಾಜಿ ಕಾರ್ಪೊರೇಟರ್), ಚಂದ್ರಹಾಸ ರೈ, ಜಗದೀಶ ಶೆಟ್ಟಿ ಗುರುಪುರ, ಸುಧಾಕರ ಅಮೀನ್ ಗುರುಪುರ, ಸುರೇಶ ಬಾಳಿತ್ತಾಯ, ಕಾರ್ಯಾಧ್ಯಕ್ಷ ನಾಗೇಶ ಕೋಟ್ಯಾನ್, ದಿನೇಶ್ ಕರ್ಕೇರ ಹಾಗೂ ಇತರ ಪದಾಧಿಕಾರಿಗಳು ಇದ್ದರು.

ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಹಾಗೂ ಯಕ್ಷಾಮೃತ ಅಧ್ಯಕ್ಷ ವಾಸುದೇವ ರಾವ್ ಕುಡುಪು ಸ್ವಾಗತಿಸಿ, ವಂದಿಸಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಕನಕಾಂಗಿ ಕಲ್ಯಾಣ-ರತಿ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಮಧ್ಯಾಹ್ನ ನಾಟ್ಯಾಲಯ ಉಳ್ಳಾಲದ ವಿದುಷಿ ಸುನಿತಾ ಉಳ್ಳಾಲರ ಶಿಷ್ಯೆಯರಿಂದ `ಯಕ್ಷ-ಗಾನ-ವೈಭವ’ ಜರುಗಿತು. 2.30ರಿಂದ ಸಂಜೆ 5ರವರೆಗೆ ಸತ್ಯನಾರಾಯಣ ಪುಣಿಂಚಿತ್ತಾಯ, ರವಿಚಂದ್ರ ಕನ್ನಡಿಕಟ್ಟೆ, ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ ಮತ್ತು ಕುಮಾರಿ ಅಮೃತಾ ಅಡಿಗರ ಭಾಗವತಿಗೆಯಲ್ಲಿ `ಯಕ್ಷವೈಭವ-ಯಕ್ಷಗಾನ ಪ್ರದರ್ಶನ’ ಜರುಗಿತು

By suddi9

Leave a Reply

Your email address will not be published. Required fields are marked *