ಬೆಳ್ಳೂರು : ಫಿಜಾ, ಬರ್ಗರ್ ರುಚಿ ಹಿಡಿದಿರುವ ಈಗಿನವರಿಗೆ ತೇವು, ತಜಂಕ್ ಪಥ್ಯವಾಗಬಹುದೇ ? ಆಟಿ ತಿಂಗಳಲ್ಲಿ ಜನ ತಿನ್ನುತ್ತಿದ್ದ ಆಹಾರ ವಸ್ತು ಯುವ ಪೀಳಿಗೆಗೆ ಹೊಸ ಪರಿಚಯವಾದರೆ ಅಚ್ಚರಿಪಡಬೇಡಕಾಗಿಲ್ಲ. ಆಟಿ ಕಷ್ಟ, ಕೆಲಸ, ಹಣವಿಲ್ಲದ ತಿಂಗಳು. ಹಾಗಾಗಿ ಹಿಂದಿನ ಜನರು ಸ್ಥಳೀಯವಾಗಿ ಸಿಗುತ್ತಿದ್ದ ಸೊತ್ತುಗಳನ್ನೇ ಬಳಸಿಕೊಂಡು ಪಲ್ಯ, ತಿಂಡಿ-ತಿನಸು ಮಾಡುತ್ತಿದ್ದರು. ಆಟಿ ತಿಂಗಳಲ್ಲಿ ತಿನ್ನುತ್ತಿದ್ದ ಗೆಡ್ಡೆಗೆಣಸು, ಸೊಪ್ಪು-ತರಕಾರಿಯು ಜನರಿಗೆ ಔಷಧಿಯಾಗಿಯೂ ಪರಿಣಾಮ ಬೀರುತ್ತಿತ್ತು ಆಟಿದೊಂಜಿ ಕೂಟ’ದ ಮಹತ್ವವನ್ನು ಆಕಾಶವಾಣಿ ಕಾರ್ಯಕ್ರಮ ಸಂಯೋಜಕಿ ಮಲ್ಲಿಕಾ ಶೆಟ್ಟಿ ವಿವರಿಸಿದರು .
ಅವರು ಬಂಟ್ವಾಳ ಬಂಟರ ಸಂಘದ ಬೆಳ್ಳೂರು ವಲಯ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ `ಆಟಿಡೊಂಜಿ ಕೂಟ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಟ್ವಾಳ ಬಂಟರ ಸಂಘದ 15 ವಲಯಗಳಲ್ಲಿ ಬೆಳ್ಳೂರು ವಲಯ ಕ್ರಿಯಾಶೀಲ ಚಟುಟಿಕೆಯಲ್ಲಿ ತೊಡಗಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮೂಲಕ ಸಮಾಜ ಬಾಂಧವರಿಗೆ ಸಹಾಯ ಮಾಡೋಣ ಎಂದು ಬಂಟರ ಸಂಗದ ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ ಹೇಳಿದರು.
ಹಿಂದೆ ಒಂದು ಹೊತ್ತಿನ ಊಟಕ್ಕೆ ಕಷ್ಟ ಇತ್ತು. ಈಗ ಯಾರಿಗೂ ಹೇಳಿಕೊಳ್ಳುವ ತತ್ವಾರ ಇಲ್ಲ. ಆಟಿ ಕಠಿಣ ತಿಂಗಳೆಂಬ ಪ್ರತೀತಿ ಇತ್ತು. ಆದರೆ ಈ ಬಾರಿ ವರ್ಷಗಳ ಬಳಿಕ ಆಟಿ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜನರಲ್ಲಿ ಪರಿಸರದ ಮೇಲಿನ ಕಾಳಜಿ ಹೆಚ್ಚಿರುವುದರಿಂದ ಉತ್ತಮ ಮಳೆ, ಬೆಳೆಯಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.

ಆಟಿ ಶೂನ್ಯ ಮಾಸವೆಂದು ಹೇಳಲಾಗುತ್ತಿದ್ದರೂ, ಈಗ ನಾವೆಲ್ಲರೂ ತುಳುನಾಡ ಆಚರಣೆಯಲ್ಲಿ ಒಂದೆಡೆ ಸೇರುವ ಸಮಯವಾಗಿದೆ. ಇಂತಹ ಕೂಟಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಒಂದಷ್ಟು ತ್ಯಾಗ ಮಾಡುವ ಮನೋಭಾವ ಹೊಂದಬೇಕು ಎಂದು ಡಾ. ಆಶಾ ಜ್ಯೋತಿ ರೈ ತಿಳಿಸಿದರು.
ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದವರನ್ನು ಶಾಸಕ ರಾಜೇಶ್ ನಾೈಕ್ ಗೌರವಿಸಿದರು. ಮಧ್ಯಾಹ್ನ ಕಬ್ಬಡಿ, ಹಗ್ಗಜಗ್ಗಾಟ, ಒಂದು ಕಾಲಿನ ಓಟ, ಅದೃಷ್ಟ ಆಟಗಳು ಜರುಗಿತು. ಕು. ಅದ್ವಿತಾ ಶೆಟ್ಟಿ ನೃತ್ಯ ಕಾರ್ಯಕ್ರಮ, ಸಂಗೀತ ನಿರ್ದೇಶಕ ರಾಜೇಶ್ ಮಂಗಳೂರು ಮತ್ತು ಬಸವರಾಜ ಹೆಗ್ಡೆ ತಂಡದಿಂದ ಗಾನ ಸುಧೆ ಸಾದರಗೊಂಡಿತು ವಿಜೆ. ದೇವು ನಿರೂಪಿಸಿದರು.
ವೇದಿಕೆಯಲ್ಲಿ ಜಿ.ಪಂ ಸದಸ್ಯ ಚಂದ್ರಪ್ರಕಾಶ್ಶೆಟ್ಟಿ ತುಂಬೆ, ಚಿತ್ತರಂಜನ್ ಶೆಟ್ಟಿ ನುಳಿಯಾಲುಗುತ್ತು ,ಆಶಾಪ್ರಸಾದ್ ರೈ, ಪುತ್ತೂರು ಧನಂಜಯ್ ರೈ, ಸೀತಾರಾಮ ಪೂಂಜ ಅತಿಕಾರಹಿತ್ಲು,ಮಹಬಲ ಆಳ್ವ ಕಮ್ಮಾಜೆ, ಸದಾಶಿವ ಶೆಟ್ಟಿ ಬೆಳ್ಳೂರು ಮಠ, ಕಿಶೋರ್ ಭಂಡಾರಿ, ಹರೀಶ್ ಶೆಟ್ಟಿ ಪಡು, ಮಲ್ಲಿಕಾ ವಿ.ಶೆಟ್ಟಿ ಪಡು,ಕೃಷ್ಣಪ್ರಸಾದ್ ರೈ ಬೆಳ್ಳೂರು ಗುತ್ತು, ಸುಧಾಕರ ಎಸ್ ಪೂಂಜ, ಚಂದ್ರಾಹಾಶ ಡಿ.ಶೆಟ್ಟಿ, ಚೌಟರ ಮನೆ ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ ಬಡಕಬೈಲ್, ಚಂದ್ರಶೇಖರ ಭಂಡಾರಿ ಕಲಾಯಿ, ನಿರಂಜನದಾಸ್ ಭಂಡಾರಿ ಕಮ್ಮಾಜೆ,
ಕಾರ್ಯಕ್ರಮದ ಬಂಟರ ಸಂಘ ಬೆಳ್ಳೂರು ವಲಯದ ಪದಾದಿಕಾರಿಗಳಾದ ಅಧ್ಯಕ್ಷ ರಾಜೇಶ ಹೆಗ್ಡೆ, ಗೌರವಾಧ್ಯಕ್ಷ ರಘುನಾಥ ಪಯ್ಯಡೆ ಪದಾಧಿಕಾರಿಗಳಾದ ಸುಧೀರ್.ಎಸ್ ಪೂಂಜ, ನರೇಶ್ಕುಮಾರ್ ಶೆಟ್ಟಿ. ಕರುಣಾಕರ ಶೆಟ್ಟಿ, ಸಂಧ್ಯಾ ರೈ, ಸತೀಶ ಕುಮಾರ್ ಶೆಟ್ಟಿ, ಪುಷ್ಪರಾಜ ಶೆಟ್ಟಿ, ದಯಾನಂದ ಶೆಟ್ಟಿ, ಉದಯ ಡಿ. ಶೆಟ್ಟಿ, ನಿತಿನ್ ಆಳ್ವ ಮೊದಲಾದವರಿದ್ದರು. ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ. ರಾಜೇಶ್ ಹೆಗ್ಡೆ ವಂದಿಸಿದರು.
ಕಾರ್ಯಕ್ರಮದ ವಿಶೇಷತೆ
ಸಾರಣೆ ಅಡ್ಡೆ ,ತಾರಾಯಿದ ಗಂಜಿ, ಅಪ್ಪ, ಮಣ್ಣಿ,ಗೆಂಡದ ಅಡ್ಯೆ, ಸಿಕೆತ ಅಡ್ಯೆ,ಬೆಲ್ಲ ತಾರಾಯಿದ ಗಟ್ಟಿ,ತೆಂಗಿನಕಾಯಿಹಾಲು, ಸೇಮೆದಡ್ಯೆ,ಜೀಗುಜ್ಜೆ ಪದೆಂಗಿ,ಮೂಡೆ, ನೀರ್ ದೋಸೆ ಓಡು ರೊಟ್ಟಿ,ಪೆಲಕಾಯಿ ಗಟ್ಟಿ,ಪತ್ರೊಡೆ,ಬಟಾಟೆ ಬಟಾನಿ, ತೇಟ್ಲ ಹೆಸರು ಸೌತೆ,ಕಣಿಲೆ ಪದೆಂಗಿ ಗಸಿ,ಉಪ್ಪಡ್ ಪಚ್ಚಿರ್,ಗುಜ್ಜೆ ಕಡ್ಲೆ,ಅಂಬಡೆ ಕಂಚಲ,ತೇಟ್ಲ ಅಂಬಡೆ, ಗೂಂಜಿ ತೇಟ್ಲ,ಕಡ್ಲೆ ಮನೋಲಿ,ನುಗ್ಗೆ ಸೊಪ್ಪು,ತಜಂಕ್ ಪೆಲ್ತರಿ,ಕುಡುತ ಚಟ್ನಿ, ಪೆಜಕಾಯಿ ಚಟ್ನಿ, ತಮರೆ ಚಟ್ನಿ,ಉಪ್ಪಿನಕಾಯಿ ಹಲಾವಾರು ಬಗೆಯ ಪದಾರ್ಥಗಳು ಇದ್ದವು







Bunts of Buntwal Original Alupa dynsty discendents!!!