ಕೈಕಂಬ : ಗುರುಪುರ ಬಂಗ್ಲೆಗುಡ್ಡೆಯ `ಹೆಲ್ಫ್ ಗೈಸ್’ ಸಂಘಟನೆಯ ಕಾರ್ಯಕರ್ತರು ಹಾಗೂ ನೈಸ್ ಕ್ಯಾಟರ್ಸ್ ಇವರ ಮುಂದಲತ್ವದಲ್ಲಿ ಪೊಳಲಿ ದ್ವಾರದ ಬಳಿ ಹೆದ್ದಾರಿಯಲ್ಲಿ ಮೊನ್ನೆ ಕೊಡಗು ಪ್ರಕೃತಿ ವಿಪತ್ತು ಸಂತ್ರಸ್ತರಿಗೆ ನೆರವಾಗಲು ಸ್ಥಳೀಯರು ಮತ್ತು ಇತರ ವಾಹನ ಪ್ರಯಾಣಿಕರಿಂದ ಪರಿಹಾರ ನಿಧಿಗೆ ಒಟ್ಟು 1.48 ಲಕ್ಷ ರೂ ಸಂಗ್ರಹಿಸಿದರು.21vp help gys

ಸಂಗ್ರಹವಾದ 1.48 ಲಕ್ಷ ರೂಗೆ ಇನ್ನೂ ಮೂರು ಲಕ್ಷ ರೂ ಸೇರಿಸಿ ಒಟ್ಟು ಐದು ಲಕ್ಷ ರೂ ಮೊತ್ತದ ಸೊತ್ತು ಖರೀದಿಸಿ, ಸೋಮವಾರ ನೈಸ್ ಕ್ಯಾಟರ್ಸ್ ಮಾಲಕ ದೀಪಕ್ ಕೋಟ್ಯಾನ್‍ರ ಲಾರಿಯಲ್ಲಿ ಕೊಡಗಿಗೆ ಸಾಗಿಸಲಾಯಿತು. ಈ ಮಾನವೀಯ ಕಾರ್ಯದಲ್ಲಿ ದೀಪಕ್ ಕೊಟ್ಯಾನ್, ಹೆಲ್ಫ್ ಗೈಸ್‍ನ ಸದಸ್ಯ, ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಹಸನ್ ಬಾವ, ಹಮೀದ್ ಬಂಗ್ಲೆಗುಡ್ಡೆ, ಇಜಾದ್, ಗ್ರಾಪಂ ಸದಸ್ಯ ದಾವೂದ್, ಕೆಡಿಬಿ ಸದಸ್ಯ ಜಿ. ಮೊಹಮ್ಮದ್ ಉಂಞ, ಹಮೀದ್, ಸಂಜೀವ ಪೂಜಾರಿ, ನಝೀರ್, ಮೈಯೆದ್ದಿ, ಶಂಕರ್ ಮೊದಲಾದವರು ಕೈಜೋಡಿಸಿದ್ದಾರೆ.21vp help gysh

ಕೊಡಗಿಗೆ ಕಳುಹಿಸಲಾದ ಪರಿಹಾರ ಸೊತ್ತಿನಲ್ಲಿ ಅಕ್ಕಿ, ಎಣ್ಣೆ, ಮಸಾಲೆ ಪದಾರ್ಥ, ಬಟ್ಟೆಬರೆ, ಪೇಸ್ಟ್, ಬ್ರಶ್, ಬಕೇಟು, ಈರುಳ್ಳಿ, ಬಟಾಟೆ, ಬೆಡ್‍ಶೀಟ್, ಚಾಪೆ, ಪಾತ್ರೆಪರಡಿ ಮೊದಲಾದ ದಿನವಹಿ ಬಳಕೆ ಸಾಮಗ್ರಿ ಒಳಗೊಂಡಿತ್ತು.

 

By suddi9

Leave a Reply

Your email address will not be published. Required fields are marked *