ಬಂಟ್ವಾಳ: ಭಾರತೀಯ ಜೈನ್ ಮಿಲನ್ ಬಂಟ್ವಾಳ ಇವರ ನವೆಂಬರ್ ತಿಂಗಳ ಮಾಸಿಕ ಸಭೆಯು ಶುಕ್ರವಾರ ಮಿಲನ್ ಅಧ್ಯಕ್ಷ ವೀರ್ ಬಿೃಜೇಶ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಪಟ್ಟಾಭಿಷೇಕದ ಸುವರ್ಣ ಮಹೋತ್ಸವನ್ನು ಆಚರಿಸಿರುವ ಸವಿ ನೆನಪಿಗಾಗಿ, ಸಾರ್ವಜನಿಕ ಭಂದುಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮಿಲನ್ ಸದಸ್ಯರಿಂದ ಶುದ್ದ ಕುಡಿಯುವ ನೀರಿನ ಫಿಲ್ಟರನ್ನು  ನೀಡಲಾಯಿತು.

KAR_4635

ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಅಳವಡಿಸಿ, ಸಾರ್ವಜನಿಕ ಭಂದುಗಳಿಗೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮವು, ಮಿಲನ್‍ನ ಹಿರಿಯ ಸದಸ್ಯರಾದ ವೀರ್ ಅನಂತ್ರಾಜ್ ಜೈನ್, ಪೆರಿಯಾರು ಗುತ್ತು, ಇವರು ಫಿಲ್ಟರ್‍ನ ಕೀಯನ್ನು ಹಸ್ತಾಂತರಿಸುವ ಮೂಲಕ, ಡಾ| ಹೆಗ್ಗಡೆಯವರ ಪಟ್ಟಾಭಿಷೇಕದ ಸವಿನೆನಪಿಗಾಗಿ ಭಾರತೀಯ ಜೈನ್ ಮಿಲನ್ ವಲಯ-8 ರ ಆಶ್ರಯದಲ್ಲಿ 50,000 ಗಿಡಗಳನ್ನು ಹಾಗೂ 50 ವಾಟರ್ ಫಿಲ್ಟರ್‍ಗಳನ್ನು ನೀಡುವ ಕಾರ್ಯದಲ್ಲಿ ಬಂಟ್ವಾಳ ಜೈನ್ ಮಿಲನ್, ಸಮಾಜಕ್ಕೆ ಅರ್ಪಿಸುವ ಕೆಲಸವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ತಿಳಿಯಪಡಿಸಿದರು.

 

ಈ ಸಂಧರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8 ರ ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ಜೈನ್,  ವಲಯ 8 ರ ನಿರ್ದೇಶಕ ಸುದರ್ಶನ್ ಜೈನ್, ಮಾಜಿ ಅಧ್ಯಕ್ಷರಾದ ವೀರ್ ಅರ್ಕಕೀರ್ತಿ ಇಂದ್ರ, ಉಪಾಧ್ಯಕ್ಷರಾದ ವೀರ್ ಡಾ| ಸುದೀಪ್ ಸಿದ್ದಕಟ್ಟೆ, ವೀರಾಂಗನಾ ಮಮತಾ ಎ. ಜೈನ್, ವೀರ್ ಭರತ್‍ರಾಜ್ ಪಾಪುದಡ್ಕ, ಮಹಾವೀರ ಅಜ್ರಿ ಉಪಸ್ಥಿತರಿದ್ದರು.

ವೀರಾಂಗನಾ ಚಂದನಾ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಚಂದ್ರಕಾಂತ್ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ವೀರಾಂಗನಾ ಗೀತಾ ಜಿನಚಂದ್ರ ವಂದಿಸಿದರು

By suddi9

Leave a Reply

Your email address will not be published. Required fields are marked *