ಬಂಟ್ವಾಳ: ಭಾರತೀಯ ಜೈನ್ ಮಿಲನ್ ಬಂಟ್ವಾಳ ಇವರ ನವೆಂಬರ್ ತಿಂಗಳ ಮಾಸಿಕ ಸಭೆಯು ಶುಕ್ರವಾರ ಮಿಲನ್ ಅಧ್ಯಕ್ಷ ವೀರ್ ಬಿೃಜೇಶ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಪಟ್ಟಾಭಿಷೇಕದ ಸುವರ್ಣ ಮಹೋತ್ಸವನ್ನು ಆಚರಿಸಿರುವ ಸವಿ ನೆನಪಿಗಾಗಿ, ಸಾರ್ವಜನಿಕ ಭಂದುಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮಿಲನ್ ಸದಸ್ಯರಿಂದ ಶುದ್ದ ಕುಡಿಯುವ ನೀರಿನ ಫಿಲ್ಟರನ್ನು ನೀಡಲಾಯಿತು.
ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಅಳವಡಿಸಿ, ಸಾರ್ವಜನಿಕ ಭಂದುಗಳಿಗೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮವು, ಮಿಲನ್ನ ಹಿರಿಯ ಸದಸ್ಯರಾದ ವೀರ್ ಅನಂತ್ರಾಜ್ ಜೈನ್, ಪೆರಿಯಾರು ಗುತ್ತು, ಇವರು ಫಿಲ್ಟರ್ನ ಕೀಯನ್ನು ಹಸ್ತಾಂತರಿಸುವ ಮೂಲಕ, ಡಾ| ಹೆಗ್ಗಡೆಯವರ ಪಟ್ಟಾಭಿಷೇಕದ ಸವಿನೆನಪಿಗಾಗಿ ಭಾರತೀಯ ಜೈನ್ ಮಿಲನ್ ವಲಯ-8 ರ ಆಶ್ರಯದಲ್ಲಿ 50,000 ಗಿಡಗಳನ್ನು ಹಾಗೂ 50 ವಾಟರ್ ಫಿಲ್ಟರ್ಗಳನ್ನು ನೀಡುವ ಕಾರ್ಯದಲ್ಲಿ ಬಂಟ್ವಾಳ ಜೈನ್ ಮಿಲನ್, ಸಮಾಜಕ್ಕೆ ಅರ್ಪಿಸುವ ಕೆಲಸವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ತಿಳಿಯಪಡಿಸಿದರು.
ಈ ಸಂಧರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8 ರ ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ಜೈನ್, ವಲಯ 8 ರ ನಿರ್ದೇಶಕ ಸುದರ್ಶನ್ ಜೈನ್, ಮಾಜಿ ಅಧ್ಯಕ್ಷರಾದ ವೀರ್ ಅರ್ಕಕೀರ್ತಿ ಇಂದ್ರ, ಉಪಾಧ್ಯಕ್ಷರಾದ ವೀರ್ ಡಾ| ಸುದೀಪ್ ಸಿದ್ದಕಟ್ಟೆ, ವೀರಾಂಗನಾ ಮಮತಾ ಎ. ಜೈನ್, ವೀರ್ ಭರತ್ರಾಜ್ ಪಾಪುದಡ್ಕ, ಮಹಾವೀರ ಅಜ್ರಿ ಉಪಸ್ಥಿತರಿದ್ದರು.
ವೀರಾಂಗನಾ ಚಂದನಾ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಚಂದ್ರಕಾಂತ್ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ವೀರಾಂಗನಾ ಗೀತಾ ಜಿನಚಂದ್ರ ವಂದಿಸಿದರು
