ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿ ಸಾರ್ವಜನಿಕ ವಿವಿಧೋದ್ದೇಶ ಕಾರ್ಯಕ್ರಮಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕಾರ್ಯಚರಿಸುತ್ತಿರುವ ಸ್ಪರ್ಶ ಕಲಾಮಂದಿರದ ವಠಾರದಲ್ಲಿ ಸುಮಾರು 300 ರಿಂದ 400 ಆಸನ ವ್ಯವಸ್ಥೆ ಕೈಗೊಳ್ಳುವ ಮಿನಿ ಸ್ಪರ್ಶ ಸಭಾ ಮಂಟಪ ಉದ್ಘಾಟನೆಯು ಹಿರಿಯರಾದ ಪೆರಿಯಾರುಗುತ್ತು ಶ್ರೀ ಅನಂತ್ರಾಜ್ ಜೈನ್ ಇವರು ಉದ್ಘಾಟಿಸಿದರು.
ಈ ಸಂಸ್ಥೆ ಮುಖ್ಯ ವ್ಯವಸ್ಥಾಪಕರಾದ ಶ್ರೀ ಸುಭಾಶ್ಚಂದ್ರ ಜೈನ್ ಇವರು ಮಾತನಾಡುತ್ತಾ, ಸಾರ್ವಜನಿಕ ಭಂದುಗಳು, ಹಿತೈಷಿಗಳ ಬೇಡಿಕೆಯಂತೆ ಚಿಕ್ಕ ಚಿಕ್ಕ ಕಾರ್ಯಕ್ರಮಗಳ ಸಭೆ ಸಮಾರಂಭಗಳು, ಅಧಿವೇಶನಗಳು ನಡೆಸುವುದಕ್ಕೆ ಅವಕಾಶವಾಗುವಂತೆ ಈ ಸಭಾ ಮಂಟಪವನ್ನು ಆರಂಭಿಸಲಾಯಿತು. ಸ್ಪರ್ಶ ಕಲಾಮಂದಿರ ತೆರೆದ ಹಾಲ್ ಆಗಿದ್ದರೆ… ಈ ಸಭಾ ಮಂಟಪ ಮುಚ್ಚಿರುವ ಹಾಲ್ ಆಗಿರುತ್ತದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸುಂದರ ಪ್ರಕೃತಿಮಯ ಜಾಗದಲ್ಲಿ ಈ ಮಂಟಪಗಳು ಕಾರ್ಯಚರಿಸುತ್ತಿದೆ. ಸಾರ್ವಜನಿಕ ಭಂದುಗಳು ಕಡಿಮೆ ಬಜೆಟ್‍ನ ಈ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದು ಈ ಮೂಲಕ ಕೋರಿರುತ್ತಾರೆ.
ಈ ಸಂಧರ್ಭದಲ್ಲಿ ಭೂ ಅಭಿವೃದ್ದಿ ಬ್ಯಾಂಕ್‍ನ ಅಧ್ಯಕ್ಷ ಸುದರ್ಶನ್ ಜೈನ್, ಸಿದ್ದಕಟ್ಟೆಯ ಅರ್ಕಕೀರ್ತಿ ಇಂದ್ರ, ಡಾ| ಸುದೀಪ್, ನಿವೇಶನದ ಸಹ ಮಾಲೀಕರಾದ ಶ್ರೀ ಮೋಹನ್ ಅರ್ಕಮೆ, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷರಾದ ಶ್ರೀ ಬಿೃಜೇಶ್ ಜೈನ್, ಕಾರ್ಯದರ್ಶಿ ಗೀತಾ ಜಿನಚಂದ್ರ, ಪೆರಿಯಾರು ಗುತ್ತು ಮನ್ಮಥ್‍ರಾಜ್ ಜೈನ್, ಚಂದ್ರಕಾಂತ್ ಜೈನ್, ಪಾಣೆಮಂಗಳೂರಿನ ವಿಜಯಕುಮಾರಿ ಇಂದ್ರ, ಬಂಟ್ವಾಳದ ಭರತ್ ರಾಜ್, ಮಹಾವೀರ್ ಅಜ್ರಿ, ಜಿನಚಂದ್ರ ಜೈನ್, ರಾಜರತ್ನ ಕೊಡಂಗೆ ಇವರುಗಳು ಉಪಸ್ಥಿತರಿದ್ದರು.